ಶಿರಸಿ: ಜಿಲ್ಲೆಯ ಪ್ರಸಿದ್ದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಕಲ್ಲಳ್ಳಿ ಹಾಗೂ ರೈತ ಮಹಿಳೆ ರಾಜೇಶ್ವರಿ ಹೆಗಡೆ ಹುಳಗೋಳ ಅವರಿಗೆ ಧಾರವಾಡದ ಕೃಷಿ ವಿವಿ ವಿಶೇಷ ಪುರಸ್ಕಾರ ಹಾಗೂ ಅತ್ಯುತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದರು. ಕೃಷಿ ಸಚಿವ ಬಿ ಸಿ ಪಾಟೀಲ ಇತರರು ಇದ್ದರು. ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ 2021-22ನೇ ಸಾಲಿಗೆ ವಿವಿಧ ಜಿಲ್ಲೆಗಳಿಂದ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆಯರನ್ನು ಆಯ್ಕೆ ಮಾಡಲಾಗಿತ್ತು.
ಜೇನುಕೃಷಿಕ ಮಧುಕೇಶ್ವರ, ರೈತ ಮಹಿಳೆ ರಾಜೇಶ್ವರಿ ಹೆಗಡೆಗೆ ಕೃಷಿ ಪುರಸ್ಕಾರ;ಸನ್ಮಾನ
