ಭಟ್ಕಳ: ಪಟ್ಟಣದಲ್ಲಿ ಅನಗತ್ಯವಾಗಿ ಅನಧಿಕೃತ ಮಸೀದಿಗಳು ನಿರ್ಮಾಣವಾಗುತ್ತಿರುವ ಕುರಿತು ಹಿಂದೂ ಜಾಗರಣ ವೇದಿಕೆ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಬಂದರ್ ರೋಡಿನ ಅಕ್ಕಪಕ್ಕದ ಪರಿಸರದಲ್ಲಿ ಹಲವಾರು ಮಸೀದಿಗಳು ಇದ್ದು ಕೂಡ, ಅದೇ ವ್ಯಾಪ್ತಿಯಲ್ಲಿ ಅನಗತ್ಯವಾಗಿ ಮತ್ತೆ ಮಸೀದಿ ನಿರ್ಮಾಣವಾಗುತ್ತಿದೆ. ಇದರಿಂದ ಇನ್ನುಳಿದ ಧರ್ಮಿಯರು ಆ ಪರಿಸರದಲ್ಲಿ ತಿರುಗಾಡುವುದು ತುಂಬ ಕಷ್ಟಕರವಾಗುತ್ತಿದ್ದು, ಇತರೇ ಧರ್ಮೀಯರು ತೀವ್ರ ಭಯ ಹಾಗೂ ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಈ ಕೂಡಲೇ ಅನಧಿಕೃತ ಮಸೀದಿಯನ್ನು ತೆರವುಗೊಳಿಸಿಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಾವು ರೂಪುರೇಷೆಗಳೊಂದಿಗೆ ತೀವ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಮೊಗೇರ, ತಾಲೂಕಾ ಅಧ್ಯಕ್ಷ ವಾಸು ನಾಯ್ಕ, ತಾಲೂಕಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮುಟ್ಟಳ್ಳಿ, ಕೃಷ್ಣ ಕಂಚುಗಾರ, ಶ್ರೀನಿವಾಸ ಹನುಮಾನಗರ, ಕುಮಾರ ನಾಯ್ಕ, ಸಂತೋಷ ನಾಯ್ಕ, ನಾಗೇಶ ನಾಯ್ಕ, ಲೋಕೇಶ ದೇವಾಡಿಗ ಮುಂತಾದವರು ಇದ್ದರು.