Slide
Slide
Slide
previous arrow
next arrow

ಪ್ರತಿಭಾ ಕಾರಂಜಿಯಲ್ಲಿ ಅಚಾತುರ್ಯ: ನೀಡಿದ ಬಹುಮಾನ ವಾಪಾಸ್ ಪಡೆದ ಅಧಿಕಾರಿಗಳು

300x250 AD

ಹೊನ್ನಾವರ: ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ನೀಡಿ ಅರ್ಧ ಗಂಟೆ ಬಳಿಕ ಬೇರೆಯೊಬ್ಬ ವಿದ್ಯಾರ್ಥಿಯನ್ನು ಆಯ್ಕೆ ಮಾಡುವ ಮೂಲಕ ಶಿಕ್ಷಣ ಇಲಾಖೆ ಅಚಾತುರ್ಯವೆಸಗಿದ ಘಟನೆ ವರದಿಯಾಗಿದೆ.
ತಾಲೂಕಿನ ಗುಂಡಿಬೈಲ್ ನಂ.2 ಶಾಲೆಯಲ್ಲಿ ಜರುಗಿದ ಚಿಕ್ಕನಕೋಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಬೇಗ ಮನೆಗೆ ಹೋಗಬೇಕು ಎನ್ನುವ ಕಾರಣಕ್ಕೆ ಬಹುಮಾನ ಕೊಡುವಲ್ಲಿ ಶಿಕ್ಷಣ ಇಲಾಖೆ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.
ಹೆರಾವಲಿ ಕಿ.ಪ್ರಾ.ಶಾಲೆಯ 4ನೇ ತರಗತಿಯ ಸದಾನಂದ ಭಟ್ ಹಾಲಕ್ಕಿ ಮಹಿಳೆಯ ಗ್ರಾಮೀಣ ಸೊಗಡಿನ ವೇಷದ ಮೂಲಕ ಛದ್ಮವೇಶ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಸ್ಪರ್ಧೆ ಬೆಳಗಿನ ಅವಧಿಯಲ್ಲಿ ನಡೆದಿದ್ದು ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಬಹುಮಾನ ಘೋಷಣೆ ಮಾಡಿ ಚಿಕ್ಕನಕೋಡ ಗ್ರಾ.ಪಂ. ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಮೂಲಕ ಬಹುಮಾನ ಹಾಗೂ ಪ್ರಶಸ್ತ್ರಿ ಪತ್ರ ವಿತರಿಸಲಾಗಿತ್ತು. ಅರ್ಧ ಗಂಟೆಯ ಬಳಿಕ ಬೇರೆಯವರು ಆಯ್ಕೆ ಆಗಿದ್ದಾರೆ ಎಂದು ವಾಪಸ್ ಪಡೆದಿದ್ದಾರೆ.
ಮಕ್ಕಳ ಮನಸ್ಸನ್ನು ಅರಳಿಸುವ ಉದ್ದೇಶದಿಂದ ಸರಕಾರ ಜಾರಿಗೆ ತಂದಿರುವ ಪ್ರತಿಭಾಕಾರಂಜಿ ಮಕ್ಕಳ ಪ್ರತಿಭೆ ಗುರುತಿಸುವ ವಿಷಯದಲ್ಲಿ ದೊಡ್ಡವರ ರಾಜಕೀಯ ನಡೆಯುತ್ತಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ಕೋಟ್…
ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಬಹುಮಾನವನ್ನು ನೀಡಿ ಅರ್ಧಗಂಟೆ ಬಳಿಕ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿ ಈತನಲ್ಲ, ಆ ವಿದ್ಯಾರ್ಥಿ ಬೇರೆ ಎಂದು ಘೋಷಣೆ ಮಾಡಿದ್ದಾರೆ. ತಾಲೂಕಾ ಮಟ್ಟಕ್ಕೆ ಕಳುಹಿಸಬೇಡಿ, ಮಗನ ವೇಷಭೂಷಣದ ಖರ್ಚು ನಾವು ಕೊಡುತ್ತೇವೆ ಎಂದು ಶಿಕ್ಷಕರೊಬ್ಬರು ಹೇಳಿದ್ದು ತುಂಬಾ ನೋವು ಉಂಟಾಗಿದೆ. ಈ ತಾರತಮ್ಯ ಯಾಕೆ? ಶಿಕ್ಷಕರೆ ಹೀಗೆ ಮಾಡಿದರೆ ಮಕ್ಕಳ ಭವಿಷ್ಯದ ಕಥೆ ಏನು..?
• ರೇಣುಕಾ ಭಟ್, ವಿದ್ಯಾರ್ಥಿ ತಾಯಿ

300x250 AD

ಶಿಕ್ಷಕರಿಂದ ಮಕ್ಕಳಿಗೆ ಉತ್ತೇಜನ ನೀಡಬೇಕು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವವರು. ನಮ್ಮ ಮಕ್ಕಳು ಬೆಳೆಯಬೇಕು ಎಂದು ಪಾಲಕರಾದ ನಾವು ಸಾಕಷ್ಟು ಪ್ರಯತ್ನ ಮಾಡುತ್ತೇವೆ. ಇಂತಹ ಘಟನೆ ನಮ್ಮಂತ ಪಾಲಕರ ಆತ್ಮಸ್ಥೈರ್ಯ ಕುಗ್ಗಿಸುತ್ತಿದೆ. ಚಿಕ್ಕ ಮಕ್ಕಳಿಗೂ ಕೂಡ ಈ ತಾರತಮ್ಯ ಘಾಸಿ ಉಂಟುಮಾಡುತ್ತದೆ.
• ಸುಬ್ರಹ್ಮಣ್ಯ ಭಟ್ಟ, ವಿದ್ಯಾರ್ಥಿಯ ತಂದೆ

Share This
300x250 AD
300x250 AD
300x250 AD
Back to top