ಶಿರಸಿ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಶಿರಸಿ ಸ್ಥಳೀಯ ಸಂಸ್ಥೆ, ಶಿರಸಿ ಸಹಯೋಗದಲ್ಲಿ ಸೆ. ರಂದು ಯಡಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ತಾಲೂಕಾಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ನಮ್ಮ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ವಿಭಾಗದ ವಿದ್ಯಾರ್ಥಿಗಳಾದ ಕುಮಾರ ಅಮೇಯ್.ವಾಯ್. , ಧೀರಜ್ ನಾಯ್ಕ, ಜೈದೀಪ ಕಾಮತ್, ಜೋಶ್ವಾ ಬೆಲ್ಲಂ, ನವೀನ್ ಆಚಾರಿ, ವಿನಿತ್ ಹೆಗಡೆ, ಸಂಕೇತ ವರ್ಣೇಕರ್, ಸೃಜನ್ ಶೇಟ್ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಹಾಗೂ ಗೈಡ್ಸ್ ವಿಭಾಗದ ವಿದ್ಯಾರ್ಥಿನಿಯರಾದ ಕುಮಾರಿ. ಇಶಾ ಪಟವರ್ಧನ್, ಸಹನಾ ಶೆಟ್ಟಿ, ಸುಪರ್ಣಾ ಹಿರೇಮಠ, ಶ್ರೇಯಾ ಹೆಗಡೆ, ನಿಸರ್ಗಾ ಶೇಟ್, ಗಗನಾ ಭಟ್, ಸಿಂಚನಾ ಶೆಟ್ಟಿ, ಅನಘಾ ಹೆಗಡೆ ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರು ಮತ್ತು ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ಚೇತನಾ ಪಾವಸ್ಕರ್ ಹಾಗೂ ಲಯನ್ಸ್ ಶಾಲೆಯ ಸಂಗೀತ ಸಹಶಿಕ್ಷಕಿ ಶ್ರೀಮತಿ ದೀಪಾ ಶಶಾಂಕ ಹೆಗಡೆ ಇವರು ಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಹಕರಿಸಿದ ಶಿಕ್ಷಕರಿಗೆ ಹಾಗೂ ಪಾಲಕರಿಗೆ ಶಿರಸಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಪಕ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ಬಾಂಧವರು, ಶಿರಸಿ ಲಯನ್ಸ್ ಕ್ಲಬ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.