ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕ್ರೀಡೆ ಶಾರೀರಿಕ ಆರೋಗ್ಯದ ಜತೆಗೆ ಮಾನಸಿಕ ನೆಮ್ಮದಿ ನೀಡುತ್ತದೆ. ವಿದ್ಯಾರ್ಥಿಗಳು ದಿನವೀಡಿ ಮೊಬೈಲ್, ಇಂಟರ್‌ನೆಟ್‌ನಲ್ಲಿ ಕಾಲ ಕಳೆಯದೇ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಯಾಶೀಲರಾಗಿರಬೇಕೆಂದು ಕರೆ ನೀಡಿದರು.
ಜಿಲ್ಲಾ ಪಂಚಾಯತ್, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಗಿಬ್ ಪ್ರೌಢ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಕ್ರೀಡಾಕೂಟವನ್ನು ಸಂಘಟಿಸಲಾಗಿತ್ತು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್, ಶಿಕ್ಷಕ ಸಂಘದ ಪ್ರಮುಖರಾದ ಆನಂದು ಗಾಂವ್ಕರ್, ಪಂಚಾಯತ್ ಸದಸ್ಯರು, ಇತರರು ಇದ್ದರು.
ನಂತರ ದೀವಗಿಯ ಡಿಜೆವಿಸ್ ಪ್ರೌಢ ಶಾಲೆಯಲ್ಲಿ ನಡೆದ ಪ್ರಧಾನಮಂತ್ರಿ ಪೋಷಣಶಕ್ತಿ ನಿರ್ಮಾಣ ಯೋಜನೆಯಡಿ ವಿದ್ಯಾರ್ಥಿಗಳಿಗೆ ನೀಡಲಾಗುವ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ವಿತರಿಸುವ ಕಾರ್ಯಕ್ರಮವನ್ನು ಗಜಾನನ ಪೈ ಅವರು ನೆರವೇರಿಸಿದರು. ಅಲ್ಲದೇ ಶಾಲಾ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯವಾದ ವಾಲಿಬಾಲ್, ಥ್ರೋ ಬಾಲ್, ಕೇರಮ್, ಚಸ್ ಬೋರ್ಡ, ಸ್ಕಿಪ್ಪಿಂಗ್ ಸೇರಿದಂತೆ ಇನ್ನಿತರೆ ಕ್ರೀಡಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ ಗಜಾನನ ಪೈ ಅವರು ಕ್ರೀಡಾಭಿಮಾನ ಮೆರೆದರು.
ಈ ಸಂದರ್ಭದಲ್ಲಿ ದೀವಗಿ ಗ್ರಾಪಂ ಉಪಾಧ್ಯಕ್ಷೆ ಸಂಗೀತಾ ಭಂಡಾರಿ, ಮುಖ್ಯಾಧ್ಯಾಪಕ ದಯಾನಂದ ಭಂಡಾರಿ, ಶಿಕ್ಷಕ ಸುಭಾಶ ಅಂಬಿಗ ಇತರರು ಇದ್ದರು.