Slide
Slide
Slide
previous arrow
next arrow

ಜನತೆಯ ಕುಂದುಕೊರತೆಗಳಿಗೆ ಸ್ಪಂದಿಸದೇ, ಸತಾಯಿಸಿದವರ ವಿರುದ್ಧ ಸೂಕ್ತ ಕ್ರಮ:ಅಜಯ ಭಂಡಾರ್ಕರ

300x250 AD

ಕುಮಟಾ: ಪಟ್ಟಣದ ಜನತೆಯ ಕುಂದುಕೊರತೆಗಳಿಗೆ ಸ್ಪಂದಿಸದೇ ವಿನಾಕಾರಣ ಸತಾಯಿಸುವ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಅಜಯ ಭಂಡಾರ್ಕರ ಅವರು ಎಚ್ಚರಿಸಿದರು.
ಪಟ್ಟಣದ ಪುರಸಭೆಯ ರಾ.ರಾ.ಅಣ್ಣಾ ಪೈ ಸಭಾಭನದಲ್ಲಿ ಪುರಸಭಾ ಅಧ್ಯಕ್ಷೆ ಅನುರಾಧಾ ಬಾಳೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕಚೇರಿಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇರುವುದು ಹಾಗೂ ಜನಸಾಮಾನ್ಯರ ಕೆಲಸಗಳಿಗೆ ಅನಗತ್ಯ ವಿಳಂಬ ಮಾಡಿದರೆ ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇರವಾಗಿ ವರ್ಗಾವಣೆಗೆ ಕ್ರಮ ಕೈಗೊಳ್ಳುತ್ತೇನೆ. ಸುಮಾರು 10 ರಿಂದ 15 ವರ್ಷಗಳ ಕಾಲ ಇಲ್ಲಿಯೇ ಬೇರುಬಿಟ್ಟ ಅಧಿಕಾರಿಗಳಿಗೆ ವರ್ಗಾವಣೆ ಮಾಡಿ ಚುರುಕು ಮುಟ್ಟಿಸುವ ಕೆಲಸ ಆಗಬೇಕಿದೆ. ಸರಿಯಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ ಎಂದು ಮುಖ್ಯಾಧಿಕಾರಿ ಘರ್ಜಿಸಿದಾಗ, ಬೇಜವಾಬ್ದಾರಿ ಅಧಿಕಾರಿಗಳನ್ನು ಇಲ್ಲಿಂದ ವರ್ಗಾವಣೆಗೆ ಕ್ರಮ ಕೈಗೊಳ್ಳಿ. ಅದಲ್ಲೆ ನಮ್ಮ ಬೆಂಬಲವಿದೆ ಎಂದು ಎಲ್ಲ ಸದಸ್ಯರು ಸ್ಪಷ್ಟಪಡಿಸಿದರು.
ಪಟ್ಟಣದಲ್ಲಿ ಕಸ ವಿಲೇವಾರಿಗೆ ಜಾಗದ ಕೊರತೆಯಿರುವುದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಹೊನ್ನಾವರದ ಕಸವಿಲೇವಾರಿ ಘಟಕಕ್ಕೆ ಕಸವನ್ನು ಸಾಗಿಸುತ್ತಿದ್ದೇವೆ. ಹೊನ್ನಾವರದ ಕರುನಾಡು ಕನ್ನಡ ಸೇನೆಯ ಪದಾಧಿಕಾರಿಗಳು ಕಸದ ವಾಹನ ತಡೆದು, ಪೊಲೀಸ್ ಠಾಣೆಗೆ ತಂದಿದ್ದಾರೆ. ಆನಂತರ ಠಾಣೆಗೆ ತೆರಳಿ, ಪೊಲೀಸ್ ನಿರೀಕ್ಷಕರಿಗೆ ಮತ್ತು ಭಟ್ಕಳ ಡಿವೈಎಸ್ಪಿ ಅವರಿಗೆ ಪತ್ರ ಬರೆದು ಕಸ ಸಾಗಾಟದ ವಾಹನಕ್ಕೆ ಪೊಲೀಸ್ ಬಂದೋಬಸ್ತ್ ಒದಗಿಲು ವಿನಂತಿಸಲಾಗಿದೆ. ಒಂದು ವೇಳೆ ಕಸದ ವಾಹನ ತಡೆದರೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಮುಖ್ಯಾಧಿಕಾರಿಗಳು ಸಭೆಗೆ ತಿಳಿಸಿದಾಗ, ನಮ್ಮ ಪೌರ ಕಾರ್ಮಿಕರಿಗೆ ಹಾಗೂ ಕಸ ಸಾಗಾಣಿಕೆಗೆ ತೊಂದರೆ ನೀಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಸರ್ವ ಸದಸ್ಯರು ಸೂಚಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಜಯ ಪ್ರಭು ಮಾತನಾಡಿ, ಮರಾಕಲ್‌ನಲ್ಲಿ ಹೊಸದಾಗಿ ಪಂಪ್‌ಸೆಟ್ ಅಳವಡಿಕೆಗೆ 3 ಕೋಟಿ, ಮರಾಕಲ್‌ನಿಂದ ಗಿಬ್ ಸರ್ಕಲ್‌ನ ಟ್ಯಾಂಕ್ ವರೆಗೆ 19 ಕಿ.ಮೀ ಪೈಪ್‌ಲೈನ್ ದುರಸ್ಥಿ ಹಾಗೂ ಹೊಸ ಪೈಪ್‌ಲೈನ್ ಜೋಡಣೆಗೆ 27.50 ಕೋಟಿ, ಪಟ್ಟಣ ವ್ಯಾಪ್ತಿಯ 65 ಕಿ.ಮೀ ಪೈಪ್‌ಲೈನ್ ನಿರ್ವಹಣೆಗೆ 21.40 ಕೋಟಿ, ಮನೆ ಮನೆಗೆ ಪ್ರತ್ಯೇಕ ಸಂಪರ್ಕ ಒದಗಿಸಲು 6.70 ಕೋಟಿ, ಪುನರ್ ನವೀಕರಣಕ್ಕೆ 1.50 ಕೋಟಿ, ನೀರಿನ ಪೈಪ್‌ಲೈನ್ ಹಾಳಾಗಿರುವುದು, ನೀರಿನ ಪೂರೈಕೆ ಗಮನಿಸಲು ಮತ್ತು ಮೀಟರ್ ಕಂಟ್ರೋಲ್ ಸ್ವಾಫ್ಟವೆರ್ ನಿರ್ವಹಣೆಗೆ 1.50 ಕೋಟಿ, ಪೈಪ್‌ಲೈನ್ ಅಳವಡಿಸಲು ಲೊಕೋಪಯೋಗಿ ಇಲಾಖೆ, ರಾಷ್ಟಿçÃಯ ಹೆದ್ದಾರಿ, ರೈಲ್ವೇ, ಹೆಸ್ಕಾಂ, ಅರಣ್ಯ, ಕಂದಾಯ ಸೇರಿದಂತೆ ಸಂಬAಧಿತ ಇಲಾಖೆಗಳ ಪರವಾನಗಿ ಪಡೆಯಲು 10 ಕೋಟಿ ರೂಗಳ ಯೋಜನೆಗಳ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಇದರಲ್ಲಿ ಬದಲಾವಣೆ ಇದ್ದರೆ ಪುನರ್ ಪರಿಶೀಲಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದರು.
ಸದಸ್ಯರಾದ ರಾಜೇಶ ಪೈ, ಸಂತೋಷ ನಾಯ್ಕ ಹಾಗೂ ಎಂ.ಟಿ.ನಾಯ್ಕ ಮಾತನಾಡಿ, ನೀರು ಪೂರೈಕೆ ಯೋಜನೆ ಬಹಳ ಹಳೆಯದಾದ್ದರಿಂದ ಬಹಳಷ್ಟು ಕಡೆಗಳಲ್ಲಿ ಹಾಳಾಗಿದೆ. ಕಾಮಗಾರಿ ಆರಂಭಿಸಲು ಮೊದಲು ಸರಿಯಾಗಿ ರೂಪು-ರೇಷೆ ಸಿದ್ದಪಡಿಸಿಕೊಳ್ಳಬೇಕು. ಮರಾಕಲ್‌ನಿಂದ ಗಿಬ್ ಸರ್ಕಲ್‌ವರೆಗೆ ಸುಮಾರು 25 ಕಿಮೀ ದೂರವಿದೆ. 19 ಕಿಮೀ ದೂರದ ಬದಲು 25 ಕಿಮೀ ಮಾಡಬೇಕು. ಪಟ್ಟಣ ವ್ಯಾಪ್ತಿಯು ಸುಮಾರು 75 ರಿಂದ 80 ಕಿಮೀ ವ್ಯಾಪ್ತಿಯಿದೆ. ಇದನ್ನು ಬದಲಾವಣೆ ಮಾಡಿ ಸರ್ಕಾರಕ್ಕೆ ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಿ ಎಂದರು. ಅಲ್ಲದೇ ದೀವಳ್ಳಿಯ ನೀರು ಶುದ್ಧೀಕರಣ ಘಟಕದಲ್ಲಿ ಸಿಸಿ ಟಿವಿ ಕ್ಯಾಮೆರಾ ಹಾಳಾಗಿ ವರ್ಷಾನುಗಟ್ಟಲೆ ಕಳೆದಿದೆ. ಅಲ್ಲಿನ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೋ? ಇಲ್ಲವೋ ಎಂಬುದನ್ನು ತಿಳಿಯಲು ಸಾಧ್ಯ. ಹೊಸ ಇನ್ವರ್ಟ್ರ್ ಅಳವಡಿಸಿ, ಶೀಘ್ರ ದುರಸ್ಥಿ ಕಾರ್ಯ ಕೈಗೊಳ್ಳಿ ಎಂದು ಪುರಸಭಾ ಮುಖ್ಯಾಧಿಕಾರಿಗೆ ಸದಸ್ಯ ರಾಜೇಶ ಪೈ ತಿಳಿಸಿದರು.
ಕುಮಟಾ ಸ್ಥಳೀಯಾಡಳಿತ 1953 ರಲ್ಲಿ ಸ್ಥಾಪನೆಯಾದರೂ ಇದುವರೆಗೂ ಘನತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗವಿಲ್ಲ ಎಂಬುದು ಬೇಸರದ ಸಂಗತಿ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಕಂದಾಯ ಇಲಾಖೆಗೆ ಸೇರಿದ 10 ಎಕರೆ ಜಾಗದಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣದ ಮಂಜೂರಿಗೆ ಸರ್ವ ಸದಸ್ಯರು ಅನುಮತಿ ನೀಡಬೇಕು ಎಂದು ವಿನಂತಿಸಿದರು. ಅದರಂತೆ ಪಟ್ಟಣದ ವಿವೇಕನಗರದಲ್ಲಿರುವ ಉದ್ಯಾನವನಕ್ಕೆ ‘ಸ್ವಾಮಿ ವಿವೇಕಾನಂದ ಉದ್ಯಾನವನ’ ಎಂದು ನಾಮಕರಣ ಮಾಡಲು ಸರ್ವ ಸದಸ್ಯರು ಸಮ್ಮತಿ ಸೂಚಿಸಿದರು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಸುಮತಿ ಭಟ್ಟ, ಸಭಾ ನಾಯಕಿ ಸುಶೀಲಾ ನಾಯ್ಕ, ಸದಸ್ಯರಾದ ಮೋಹಿನಿ ಗೌಡ, ತುಳುಸು ಗೌಡ, ಪಲ್ಲವಿ ಮಡಿವಾಳ, ಶೈಲಾ ಗೌಡ, ಗೀತಾ ಮುಕ್ರಿ, ಕಿರಣ ಅಂಬಿಗ, ಆಶಾ ನಾಯ್ಕ, ಇಶಾಖ್ ಸಮಾಲಿ, ನಾಮ ನಿರ್ದೇಶಕ ಸದಸ್ಯರಾದ ಸತೀಶ ಭಂಡಾರಿ, ಮಂಜುನಾಥ ಮುಕ್ರಿ ಹಾಗೂ ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top