ಕುಮಟಾ: ಬೆಂಗಳೂರಿನ ಉತ್ತರ ಕನ್ನಡ ಜಿಲ್ಲಾ ಒಕ್ಕಲಿಗರ ಸಂಘದಿಂದ ಶ್ರೀ ಆದಿಚುಂಚನಗಿರಿ ಸಭಾಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಒಕ್ಕಲಿಗರ ಜಾಗೃತಿ ಸಮಾವೇಶ ಶ್ರೀ ಆದಿಚುಂಚನಗಿರಿ ಪೀಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.
ಶ್ರೀ ಆದಿಚುಂಚನಗಿರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಉತ್ತರ ಕನ್ನಡ ಜಿಲ್ಲೆ ಒಕ್ಕಲಿಗರ ಜಾಗೃತಿ ಸಮಾವೇಶವನ್ನು ಶ್ರೀ ಆದಿಚುಂಚನಗಿರಿ ಪೀಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಉದ್ಘಾಟಿಸಿದರು. ನಂತರ ಆಶೀರ್ವಚನ ನೀಡಿದ ಶ್ರೀಗಳು, ಶ್ರೀ ಮಠ ಉತ್ತರ ಕನ್ನಡ ಜಿಲ್ಲೆಯ ಒಕ್ಕಲಿಗರನ್ನ ಮುನ್ನೆಲೆಗೆ ತರುವಲ್ಲಿ ಕಟ್ಟಿಬದ್ದವಾಗಿದೆ. ಪ್ರಸನ್ನನಾಥ ಸ್ವಾಮೀಜಿಯವರು ಶ್ರೀಮಠದ ಮೂರು ಒಕ್ಕಲಿಗ ಭವನವನ್ನು ಜಿಲ್ಲೆಯಲ್ಲಿ ನಿರ್ಮಾಣ ಮಾಡುವ ಮುಖಾಂತರ ಜಿಲ್ಲೆಯ ಒಕ್ಕಲಿಗರೊಂದಿಗೆ ಸದಾ ಸಂಪರ್ಕದಲ್ಲಿದ್ದು ಒಕ್ಕಲಿಗರ ಶ್ರೇಯೋಭಿವೃದ್ಧಿಗೆ ಶ್ರೀಮಠ ಸದಾ ಸಿದ್ಧವಿದೆ ಎಂದು ನುಡಿದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಉತ್ತರ ಕನ್ನಡ ಜಿಲ್ಲೆಯ ಒಕ್ಕಲಿಗರ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ನಾನು ಕೂಡ ಮುಂದಿನ ದಿನ ಉತ್ತರ ಕನ್ನಡ ಜಿಲ್ಲೆಯ ಭೇಟಿ ನೀಡಿ ಸಭೆಗಳನ್ನು ಮಾಡುತ್ತೇನೆ. ಜಿಲ್ಲೆಯ ಒಕ್ಕಲಿಗ ಭವನವನ್ನು ಬೆಂಗಳೂರಿನಲ್ಲಿ ನಿರ್ಮಿಸಲು ಸ್ಥಳವನ್ನು ಕೇಳಿದ್ದೀರಿ. ಈ ಬಗ್ಗೆ ಸಿಎಂ ಜೊತೆಗೆ ಚರ್ಚಿಸಿ, ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಒಕ್ಕಲಿಗರ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ನೀವೆಲ್ಲ ಒಕ್ಕಲಿಗರು ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಿ. ನಿಮ್ಮೊಂದಿಗೆ ಈ ಡಿಕೆ ಶಿವಕುಮಾರ್ ಯಾವತ್ತೂ ಇರುತ್ತೇನೆ ನನ್ನನ್ನು ಎಲ್ಲರೂ ಬಂದು ಭೇಟಿಯಾಗಬಹುದು. ಪರಮಪೂಜ್ಯರೊಂದಿಗೆ ಚರ್ಚಿಸಿ ಉತ್ತರ ಕನ್ನಡ ಜಿಲ್ಲೆಯ ಒಕ್ಕಲಿಗರ ಭವನ ಹಾಗೂ ನಿಮ್ಮ ನಿರೀಕ್ಷೆಯಂತೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಒಕ್ಕಲಿಗರನ್ನು ಉರಿದುಂಬಿಸಿದರು.
ಬೆAಗಳೂರು ವಿಜಯನಗರದ ಶಾಸಕ ಕೃಷ್ಣಪ್ಪ, ಚಿತ್ರ ನಿರ್ಮಾಪಕರಾದ ಉಮಾಪತಿ ಗೌಡ, ಅಂಬೇಡ್ಕರ್ ವಿಶ್ವವಿದ್ಯಾಲಯದ ಕುಲಪತಿ ಶೋಭಾ ಗೌಡ ಮತ್ತು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಡಾಕ್ಟರ್ ಆಂಜನಪ್ಪನವರ್ ಮಾತನಾಡಿ, ಸ್ವಾಮೀಜಿಯವರಿಗೆ ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಇರುವ ಒಕ್ಕಲಿಗರ ಕಾಳಜಿ ಬಗ್ಗೆ ಕೊಂಡಾಡಿದರು. ಜಿಲ್ಲೆಯ ಒಕ್ಕಲಿಗರ ಶ್ರೀಯೋದ್ದೇಶಕ್ಕೆ ನಾನು ನಿಮ್ಮೊಂದಿಗೆ ಇದ್ದೇನೆ ಎಂಬ ಭರವಸೆ ನೀಡಿದರು.
ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನಾಥ ಸ್ವಾಮೀಜಿ ಮಾತನಾಡಿ, ಇವತ್ತಿನ ಕಾರ್ಯಕ್ರಮದ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತದೆ ಜಿಲ್ಲೆಯಿಂದ ಹೆಚ್ಚಿ ಸಂಖ್ಯೆಯಲ್ಲಿ ತಾವೆಲ್ಲ ಇಲ್ಲಿಗೆ ಬಂದಿದ್ದೀರಿ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಉತ್ತರ ಕನ್ನಡ ಜಿಲ್ಲೆಯ ಒಕ್ಕಲಿಗರ ಪ್ರತಿ ಭಾಗದಲ್ಲಿ ಮುಂದಿನ ದಿನ ಬಂದು ಇನ್ನಷ್ಟು ಕಾರ್ಯಕ್ರಮವನ್ನು ಮಾಡುವ ಮುಖಾಂತರ ಜಾಗೃತಿಯನ್ನು ಹೆಚ್ಚಿಸುವ ಕೆಲಸವನ್ನು ಮಠದ ಮುಖಾಂತರ ಮಾಡುವುದಾಗಿ ತಿಳಿಸಿದರು.
ಬೆಂಗಳೂರು ಆದಿಚುಂಚನಗಿರಿ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷರಾದ ಭಾಸ್ಕರ್ ಪಟಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಒಕ್ಕಲಿಗ ಬೆಂಗಳೂರಿನಲ್ಲಿ ಸಂಘವನ್ನು ಕಟ್ಟಿರುವ ಉದ್ದೇಶ ಹಾಗೂ ಜಿಲ್ಲೆಯ ಒಕ್ಕಲಿಗರ ಶಿಕ್ಷಣ, ಉದ್ಯೋಗ, ರಾಜಕೀಯ ವ್ಯವಸ್ಥೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರಿಯಾಕೃಷ್ಣ, ಡಾ.ಅಂಬೇಡ್ಕರ್ ವಿಶ್ವವಿದ್ಯಾಲಯದ ಕುಲಪತಿ ಶೋಭಾ ಗೌಡ, ಕರವೇ ಅಧ್ಯಕ್ಷರಾದ ಧರ್ಮರಾಜ ಗೌಡ, ನಾಗರಬಾವಿ ಕಾರ್ಪೊರೇಟರ್ ದಾಸೇ ಗೌಡ, ಹಾಲಕ್ಕಿ ಒಕ್ಕಲಿಗ ಅಧ್ಯಕ್ಷರಾದ ಗೋವಿಂದ ಗೌಡ, ಹೊನ್ನಾವರದ ಕೃಷ್ಣೇ ಗೌಡ, ಮಂಜುನಾಥ್ ಪಟಗಾರ, ಕರೆ ಒಕ್ಕಲಿಗದ ಸಂಘದ ಅಧ್ಯಕ್ಷರಾದ ಅರುಣ್ ಗೌಡ, ಜಿಲ್ಲೆಯ ಒಕ್ಕಲಿಗ ಸಂಘದ ಮುಖಂಡರು ಇದ್ದರು. ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರಕನ್ನಡ ಜಿಲ್ಲೆಯ ಸುಮಾರು 500 ನೂರಕ್ಕೂ ಅಧಿಕ ಒಕ್ಕಲಿಗರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.