• Slide
  Slide
  Slide
  previous arrow
  next arrow
 • ಲಕ್ಷ್ಮೀಂದ್ರ ತೀರ್ಥರಿಗೆ ಗುರುಕಾಣಿಕೆ ಅರ್ಪಣೆ

  300x250 AD

  ಕುಮಟಾ: ಚಾತುರ್ಮಾಸ್ಯ ವೃತಾಚರಣೆಯಲ್ಲಿ ನಿರತರಾದ ಗಾಣಿಗ ಸಮಾಜದ ಕುಲ ಗುರುಗಳಾದ ಲಕ್ಷ್ಮೀಂದ್ರ ತೀರ್ಥ ಶ್ರೀಪಾದಂಗಳರವರ ದರ್ಶನ ಪಡೆದ ಇಲ್ಲಿನ ಗಾಣಿಗ ಯುವ ಬಳಗವು ಶ್ರೀಗಳಿಗೆ ಗುರುಕಾಣಿಕೆ ಅರ್ಪಿಸಿತು.

  ಕುಂದಾಪುರದ ಗಾಣಿಗ ಸಮಾಜದ ಕುಲ ಗುರುಗಳಾದ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಪಾದಂಗಳರವರು ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು ಮಠದಲ್ಲಿ ಚಾತುರ್ಮಾಸ್ಯ ವೃತಾಚರಣೆಯಲ್ಲಿ ನಿರತರಾಗಿದ್ದಾರೆ. ಅಲ್ಲಿಗೆ ತೆರಳಿದ ಕುಮಟಾದ ಗಾಣಿಗ ಯುವ ಬಳಗವು ಶ್ರೀಗಳ ದರ್ಶನ ಪಡೆದು, ಗುರು ಕಾಣಿಕೆ ಸಲ್ಲಿಸಿತು. ಬಳಗದ ಎಲ್ಲ ಪದಾಧಿಕಾರಿಗಳನ್ನು ಹರಸಿದ ಶ್ರೀಗಳು ಗಾಣಿಗ ಯುವ ಬಳಗದಿಂದ ಇನ್ನು ಹೆಚ್ಚಿನ ಸಮಾಜಮುಖಿ ಕಾರ್ಯಗಳು ನಡೆಯುವಂತಾಗಲಿ ಎಂದು ಹಾರೈಸಿದರು.

  300x250 AD

  ಈ ಸಂದರ್ಭದಲ್ಲಿ ಯುವ ಬಳಗದ ಗೌರವಾಧ್ಯಕ್ಷ ಗಣಪತಿ ಶೆಟ್ಟಿ, ಅಧ್ಯಕ್ಷ ಗಣೇಶ್ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಯುವ ಬಳಗದ ಪ್ರಮುಖರಾದ ಗೌತಮ ಶೆಟ್ಟಿ, ಗಣೇಶ್ ಶೆಟ್ಟಿ, ದತ್ತು ಶೆಟ್ಟಿ, ಶಶಾಂಕ್ ಶೆಟ್ಟಿ ಇತರರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top