Slide
Slide
Slide
previous arrow
next arrow

ಟಿಎಂಎಸ್‌ಗೆ 5.88 ಕೋಟಿ ರೂ. ನಿಕ್ಕಿ ಲಾಭ: ಆರ್.ಎಂ.ಹೆಗಡೆ

300x250 AD

ಸಿದ್ದಾಪುರ: ತಾಲೂಕಿನ ಅಡಿಕೆ ವಹಿವಾಟಿನ ಹೆಮ್ಮೆಯ ಸಹಕಾರಿ ಸಂಸ್ಥೆಯಲ್ಲೊAದಾದ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘವು 2021-22ನೇ ಸಾಲಿನಲ್ಲಿ ರೂ.197 ಕೋಟಿ ವಹಿವಾಟು ನಡೆಸಿದ್ದು, ರೂ.7,79,12,558 ನಿವ್ವಳ ಲಾಭ ಗಳಿಸಿದೆ. ನಿಧಿಗಳನ್ನು ತೆಗೆದಿರಿಸಿದ ನಂತರದಲ್ಲಿ ರೂ.5,88,22,068ರಷ್ಟು ನಿಕ್ಕಿ ಲಾಭ ಗಳಿಸಿದೆ ಎಂದು ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1947ರ ಸ್ವಾತಂತ್ರö್ಯ ಸಂಭ್ರಮದ ಕಾಲದಲ್ಲಿ ಸ್ಥಾಪಿಸಲ್ಪಟ್ಟ ನಮ್ಮ ಸಂಸ್ಥೆಯು 75 ಸಾರ್ಥಕ ವಸಂತಗಳನ್ನು ಪೂರೈಸುತ್ತಿದೆ. ಈ 75 ವರ್ಷಗಳ ಪಯಣದಲ್ಲಿ ಹಲವಾರು ಏಳು-ಬೀಳುಗಳನ್ನು ಕಂಡ ಸಂಘವು, ಇಂದು ಸದೃಢವಾಗಿದೆ. ಸಂಘದ ನಿಷ್ಠಾವಂತ ಹಾಗೂ ಅಭಿಮಾನಿ ಸದಸ್ಯರ ಸಂಪೂರ್ಣ ಸಹಕಾರ, ಅನುಭವಿ ಆಡಳಿತ ಮಂಡಳಿಯ ಸದಸ್ಯರ ಮಾರ್ಗದರ್ಶನ ಹಾಗೂ ಸೇವಾ ಮನೋಭಾವ ಹಾಗೂ ಕರ್ತವ್ಯನಿಷ್ಠೆಯ ಸಿಬ್ಬಂದಿಗಳ ಕಾಯಕದಿಂದ ಸಂಘವು ಉತ್ತಮ ಲಾಭಗಳಿಸಿ ಅಭಿವೃದ್ದಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದರು.
ಪ್ರಸ್ತುತ ಸಂಘದಲ್ಲಿ 3544 ಶೇರುದಾರ ಸದಸ್ಯರಿದ್ದು, 3.24 ಕೋಟಿ ಶೇರು ಬಂಡವಾಳ ಹೊಂದಿರುತ್ತದೆ. ಸುಮಾರು 3900 ನಾಮಮಾತ್ರ ಸದಸ್ಯರಿದ್ದು, 2021-22ನೇ ಸಾಲಿನಲ್ಲಿ ರೂ 197 ಕೋಟಿ ವಹಿವಾಟು ನಡೆಸಲಾಗಿದೆ. ಸಂಚಿತ ನಿಧಿಗಳ ಮೊತ್ತ ರೂ. 43.48 ಕೋಟಿಯಷ್ಟಿದೆ. ರೂ. 89.32 ಕೋಟಿ ಠೇವುಗಳನ್ನು ಸಂಗ್ರಹಿದ್ದು, ದುಡಿಯುವ ಬಂಡವಾಳವು ರೂ 200.66 ಕೋಟಿ ತಲುಪಿರುತ್ತದೆ. ವಿಕ್ರಿಯಿಸಿದ ಮಹಸೂಲು ರೂ. 182.10 ಕೋಟಿಯಾಗಿದ್ದು, ವರದಿಯ ವರ್ಷದಲ್ಲಿ ಕೇಂದ್ರ ಕಚೇರಿಯಲ್ಲಿ ರೂ. 3.57 ಕೋಟಿ, ಕಾನಸೂರ ಶಾಖೆಯಲ್ಲಿ 1.36 ಕೋಟಿ, ಮಾರಾಟ ಮಳಿಗೆ ಶಿರಸಿಯಲ್ಲಿ ರೂ. 70.02 ಲಕ್ಷ, ಕೃಷಿ ವಿಭಾಗದಲ್ಲಿ ರೂ.15.19 ಲಕ್ಷ, ದವಸಧಾನ್ಯ ವಿಭಾಗದಲ್ಲಿ ರೂ.13.64 ಲಕ್ಷ, ನಿಯಂತ್ರಣ ವಿಭಾಗದಲ್ಲಿ ರೂ.3.62 ಲಕ್ಷ, ದವಸಧಾನ್ಯ ಎಪಿಎಮ್‌ಸಿ ವಿಭಾಗದಲ್ಲಿರೂ 19.96 ಸಾವಿರ ಲಾಭಗಳಿಸಿದ್ದು, ಔಷಧಿ ವಿಭಾಗದಲ್ಲಿ ರೂ.1.21 ಲಕ್ಷ, ಅಡಿಕೆ ಖರೀದಿ ವಿಭಾಗದಲ್ಲಿರೂ 3.56 ಲಕ್ಷ ಹಾಗೂ ಅಕ್ಕಿ ಗಿರಣಿ ವಿಭಾಗದಲ್ಲಿ ರೂ.2.89 ಲಕ್ಷ ಹಾನಿ ಅನುಭವಿಸಿದೆ ಎಂದು ವಿವರಿಸಿದರು.
ರೈತರ ಅನುಕೂಲಕ್ಕಾಗಿ ಸಂಘವು ಕೇಂದ್ರ ಕಚೇರಿಯಲ್ಲಿ ವಿಶಾಲವಾದ ವ್ಯಾಪಾರಂಗಣವನ್ನು ನಿರ್ಮಿಸಲಾಗಿದೆ. ಕಾನಸೂರ ಶಾಖೆಯಲ್ಲ್ಲಿ ಗೋದಾಮು ಹಾಗೂ ವ್ಯಾಪಾರಂಗಣ, ಅಕ್ಕಿಗಿರಣಿಯಲ್ಲಿ ಭತ್ತದ ಚೀಲವನ್ನು ದಾಸ್ತಾನಿಡಲು ಗೋದಾಮು ಕಾಮಗಾರಿಯು ಮುಕ್ತಾಯದ ಹಂತದಲ್ಲಿದೆ. ಕೇಂದ್ರ ಕಚೇರಿಯಲ್ಲಿ ವಾಹನ ಶೆಡ್ ಹಾಗೂ ಕಾಂಪೌAಡ್ ನಿರ್ಮಾಣ ಮಾಡಲಾಗಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳ ವಿಭಾಗವನ್ನು ಕಿರಾಣಿ ಎಪಿಎಂಸಿ ಯಾರ್ಡ್ನ ಹಿಂದೆ ನಿರ್ಮಿಸಲಾಗಿದ್ದು, ಶೀಘ್ರದಲ್ಲಿಯೇ ಆರಂಭವಾಗಲಿದೆ. ಕೇಂದ್ರ ಕಛೇರಿ ಹಾಗೂ ಕಾನಸೂರ ಶಾಖೆಯಲ್ಲಿ ಹಸಿ ಅಡಿಕೆ ಟೆಂಡರ್ ಮುಖಾಂತರ ಕೂಲಿಕಾರರ ಅಭಾವದಿಂದ ಆಗುವ ಸಮಸ್ಯೆಗಳನ್ನು ತಪ್ಪಿಸಲು ಪ್ರಯತ್ನಿಸಲಾಗಿದೆ. ಹಾಗೂ ಜನರಿಗೂ ಇದರಿಂದ ಉತ್ತಮ ದರಗಳು ಲಭಿಸುತ್ತಿದೆ ಎಂದರು.
ಕೆಲವು ಆಯ್ದ ಹಿರಿಯ ಸದಸ್ಯರನ್ನು ಹಾಗೂ ಎಸ್‌ಎಸ್‌ಎಲ್‌ಸಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸಹಕಾರಿ ಸಭೆ ಹಾಗೂ ಸರ್ವ ಸಾಧಾರಣ ಸಭೆಯ ದಿನದಂದು ಸನ್ಮಾನಿಸಲಾಗುತ್ತಿದೆ. ಸದಸ್ಯರಿಗೆ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಯೋಜನೆ ಯೋಚನೆಯಲ್ಲಿದೆ. ಯಾವತ್ತೂ ಕೃಷಿ ಹುಟ್ಟುವಳಿಗಳನ್ನು ಸಂಘದ ಮುಖಾಂತರವೇ ವಿಕ್ರಿಸಲು ಹಾಗೂ ಸಂಘದಲ್ಲಿ ಲಭ್ಯವಿರುವ ಕಿರಾಣಿ ಜೀನಸುಗಳು, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕೃಷಿ ಉಪಕರಣಗಳು, ಜನೌಷಧಗಳು ಮತ್ತು ಇನ್ನಿತರ ವಸ್ತುಗಳನ್ನು ಖರೀದಿಸುವ ಮೂಲಕ ಸಂಘದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ, ನಿರ್ದೇಶಕರುಗಳಾದ ಕೆ.ಕೆ.ನಾಯ್ಕ ಸುಂಕತ್ತಿ, ಜಿ.ಎಂ.ಭಟ್ಟ ಕಾಜಿನಮನೆ, ಸುಲೋಚನಾ ಪಿ.ಶಾಸ್ತ್ರೀ ಬಿಳಗಿ, ರಮೇಶ ಹೆಗಡೆ ಕೊಡ್ತಗಣಿ, ಸುಬ್ರಾಯ ಹೆಗಡೆ ಸಾಯಿಮನೆ, ಸುಧೀರ್ ಬಿ.ಗೌಡರ್ ಬಾಳೆಕುಳಿ, ಎನ್.ಡಿ.ನಾಯ್ಕ ಕೋಲಶಿರ್ಸಿ, ಪರಶುರಾಮ ಕೆ.ನಾಯ್ಕ, ಸುಬ್ರಹ್ಮಣ್ಯ ಭಟ್ಟ ಚಟ್ನಳ್ಳಿ, ಎಂ.ಎನ್.ಹೆಗಡೆ ತಲೆಕೆರೆ, ಸಿ.ಎನ್.ಹೆಗಡೆ ತೆಂಗಾರಮನೆ, ಜಿ.ಆರ್.ಹೆಗಡೆ ಹಳದೋಟ, ಗಣಪತಿ ಹಸ್ಲರ್ ಕುಡಗುಂದ, ಲಕ್ಷ್ಮಿನಾರಾಯಣ ಹೆಗಡೆ ಬಾಳೆಕುಳಿ, ಗಣಪತಿ ಭಟ್ಟ ಕಲ್ಮನೆ, ವ್ಯವಸ್ಥಪಕರಾದ ಸತೀಶ ಎಸ್.ಹೆಗಡೆ ಹೆಗ್ಗಾರಕೈ ಉಪಸ್ಥಿತರಿದ್ದರು.


ಟಿ.ಎಮ್.ಎಸ್ ವ್ಯಾಲೆಟ್: ಸದರಿ ಆರ್ಥಿಕ ವರ್ಷದಲ್ಲಿ ಸಂಘವು ಸದಸ್ಯರ ಕ್ಷೇಮ ನಿಧಿ ಯೋಜನೆ ಅಡಿಯಲ್ಲಿ ಸದಸ್ಯರ ಆರೋಗ್ಯ ವೆಚ್ಚವನ್ನು ಯೋಜನೆಯ ನಿಬಂಧನೆಗೊಳಪಟ್ಟು ಭರಣ ಮಾಡಿಕೊಟ್ಟಿದೆ. ಟೆಲಿಗ್ರಾಂ ಮೂಲಕ ಸದಸ್ಯರ ಖಾತೆ ಮಾಹಿತಿ ಹಾಗೂ ಅಡಕೆ ದರಗಳ ಮಾಹಿತಿಯನ್ನು ಸಂದೇಶಗಳ ಮೂಲಕ ತಲುಪಿಸುತ್ತಿದೆ. ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಪರಿಕಲ್ಪನೆಯೊಂದಿಗೆ ನೂತನವಾಗಿ ‘ಟಿ.ಎಮ್.ಎಸ್ ವ್ಯಾಲೇಟ್’ ನ್ನು ಪರಿಚಯಿಸಲಾಗುತ್ತಿದೆ. ಸದಸ್ಯರ ಮಹಸೂಲ ವಿಕ್ರಿಯ ಮೇಲೆ ಪ್ರತಿ ಕ್ವಿಂಟಲ್ ಗೆ ಹಮಾಲಿ, ಸಾಗಾಣಿಕಾ ವೆಚ್ಚ ಸಹಿತ ರೂ.50 ವಿಕ್ರಿ ಪ್ರೋತ್ಸಾಹನವನ್ನು ನೀಡಲಾಗುತ್ತಿದೆ. ಬ್ರಾಡ್ ವೇ ಕಂಪನಿಯ ಸಹಯೋಗದೊಂದಿಗೆ ಸದಸ್ಯರಿಗೆ ಇಂಟರ್-ನೆಟ್ ಸೇವೆಯನ್ನು ಅತ್ಯಂತ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.


ಸೇವಾ ವಿಭಾಗ ಆರಂಭಿಸಲಾಗುತ್ತಿದೆ: ಉತ್ತಮ ವ್ಯಾವಹಾರಿಕ ಪೈಪೋಟಿಯನ್ನು ಎದುರಿಸಲು ಸಂಘವು ಇನ್ನೂ ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ಸದಸ್ಯರ ಅನುಕೂಲಕ್ಕಾಗಿ ಶೀಘ್ರದಲ್ಲಿಯೇ ಸೇವಾ ವಿಭಾಗವನ್ನು (ಕರೆನ್ಸಿ, ರಿಚಾರ್ಜ್, ಟಿಕೇಟ್ ಬುಕ್ಕಿಂಗ್ ಹಾಗೂ ಇನ್ನಿತರ ಸೇವೆ) ಆರಂಭಿಸಲಾಗುತ್ತಿದೆ. ಕಿರಾಣಿ ಎಪಿಎಮ್‌ಸಿ ವಿಭಾಗದ ಎದರುಗಡೆ ಹಣ್ಣು ಮತ್ತು ತರಕಾರಿ ಮಾರಾಟವನ್ನು ಪ್ರಾರಂಭಿಸಲಾಗುತ್ತಿದೆ. ಸಂಘದ ವತಿಯಿಂದ ಪೆಟ್ರೋಲ್ ಬಂಕ್ ಆರಂಭಿಸುವ ಉದ್ದೇಶದಿಂದ ನಿವೇಶನವನ್ನು ಖರೀದಿಸಲಾಗಿದೆ.

300x250 AD


26ಕ್ಕೆ ವಾರ್ಷಿಕ ಸಾಧಾರಣ ಸಭೆ: ಆ.23ರ ಮಂಗಳವಾರ ಮದ್ಯಾಹ್ನ 3 ಗಂಟೆಗೆ ಶಿರಸಿ ಮಾರಾಟ ಮಳಿಗೆಯಲ್ಲಿ ಹಾಗೂ 24ರ ಬುಧವಾರ ಕಾನಸೂರ ಶಾಖೆಯಲ್ಲಿ ಸಹಕಾರಿ ಸಭೆಯನ್ನು ಕರೆಯಲಾಗಿದೆ. 26ರ ಶುಕ್ರವಾರ ಮಧ್ಯಾಹ್ನ 3 ಘಂಟೆಗೆ ಸಂಘದ ವ್ಯಾಪಾರಾಂಗಣದಲ್ಲಿ ವಾರ್ಷಿಕ ಸಾಧಾರಣ ಸಭೆಯನ್ನು ಕರೆಯಲಾಗಿದೆ. ಸಂಘದ ಯಾವತ್ತೂ ಸದಸ್ಯರು ಸಭೆಗೆ ಆಗಮಿಸಬೇಕಾಗಿ ಕೋರಿದೆ. ಸಭೆಯ ಕರ‍್ಯ ಕಾಲಾಪಗಳು ಮುಗಿದ ನಂತರದಲ್ಲಿ ಬಡಗುತಿಟ್ಟಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ‘ಚಕ್ರಚಂಡಿಕೆ’ ಎಂಬ ಯಕ್ಷಗಾನ ಕಾರ್ಯಕ್ರಮವಿದೆ.

Share This
300x250 AD
300x250 AD
300x250 AD
Back to top