ಶಿರಸಿ: ನಗರದ ನಾಡಿಗಗಲ್ಲಿಯ ಡಾ.ಎಲ್.ಎಚ್.ಪೈ ಆರ್ಥೊಪೆಡಿಕ್ಸ್ & ಸ್ಪೆಶಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ನೂತನ ದಂತ ಚಿಕಿತ್ಸಾ ವಿಭಾಗವು ಆ.21 , ರವಿವಾರ ಮಧ್ಯಾಹ್ನ 4 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಉದ್ಘಾಟಕರಾಗಿ ಉಪವಿಭಾಗಾಧಿಕಾರಿ ದೇವರಾಜ ಆರ್. ಆಗಮಿಸಲಿದ್ದು ಅತಿಥಿಗಳಾಗಿ ಮಕ್ಕಳ ತಜ್ಞ ಎನ್.ಆರ್.ಹೆಗಡೆ ಉಪಸ್ಥಿತರಿರಲಿದ್ದಾರೆ.
ನೂತನ ದಂತ ಚಿಕಿತ್ಸಾ ವಿಭಾಗದಲ್ಲಿ ಕೃತಕ ದಂತ ಹಾಗೂ ಇಂಪ್ಲಾಂಟ್ ತಜ್ಞರಾದ ಡಾ. ಶ್ರೇಯಾ ಬಿ. ಹೆಗಡೆ ಕರ್ತವ್ಯ ನಿರ್ವಹಿಸಲಿದ್ದು ಉದ್ಘಾಟನಾ ಸಮಾರಂಭಕ್ಕೆ ಸರ್ವರೂ ಆಗಮಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.