ದಾಂಡೇಲಿ: ಖಾಸಗೀರಕಣವನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಇಲಾಖೆ ಸಂಘಟನೆಗಳ ಕರೆಯ ಮೇರೆಗೆ ಅಖಿಲ ಭಾರತ ಅಂಚೆ ಇಲಾಖೆಯ ಮುಷ್ಕರದ ಹಿನ್ನಲೆಯಲ್ಲಿ ನಗರದ ಪ್ರಧಾನ ಅಂಚೆ ಕಚೇರಿಯ ಮುಂಭಾಗದಲ್ಲಿ ಅಂಚೆ ನೌಕರರು ಕೆಲಸ ಸ್ಥಗಿತಗೊಳಿಸಿ ಬುಧವಾರ ಮುಷ್ಕರವನ್ನು ಕೈಗೊಂಡಿದ್ದಾರೆ.
ಅಂಚೆ ಇಲಾಖೆಯನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿ, ಖಾಸಗೀಕರಣ ನಿರ್ಧಾರವನ್ನು ಕೈಬಿಡಬೇಕೆಂದು ಆಗ್ರಹಿಸಿ, ಎನ್.ಪಿ.ಎಸ್- ಓಪಿಎಸ್ ಅನ್ನು ಮರುಸ್ಥಾಪಿಸುವಂತೆ, ಬಡ್ತಿಗಾಗಿ ಅತ್ಯಂತ ಉತ್ತಮ ಬೆಂಚ್ ಮಾರ್ಕ್ ಅನ್ನು ಹಿಂಪಡೆಯಬೇಕು, ಗ್ರಾಮೀಣ ಡಾಕ್ ಸೇವಕರಿಗೆ ನಾಗರಿಕ ಸೇವಕ ಸ್ಥಾನಮಾನ ನೀಡಿ ಮತ್ತು ಅವರ ಸೇವೆಯನ್ನು ಕ್ರಮಬದ್ಧಗೊಳಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಂಚೆ ನೌಕರರಾದ ರಘುವೀರ ಗೌಡ ಮತ್ತು ಜಿ.ಎಸ್.ಕುಲಕರ್ಣಿಯವರ ನೇತೃತ್ವದಲ್ಲಿ ಅಂಚೆ ಸಿಬ್ಬಂದಿಗಳು ಮುಷ್ಕರವನ್ನು ಕೈಗೊಂಡಿದ್ದಾರೆ.