ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ನಡೆಯಿತು. ಭಾರತೀಯ ವಾಯುಸೇನೆ ಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಶ್ರೀ ಶ್ರೀಕಾಂತ ಹೆಗಡೆ ಬಾಳೆಗದ್ದೆ ಯಶಸ್ಸಿನ ಏಳು ಕೀಲಿ ಕೈ ಗಳನ್ನು ವಿವರಿಸುತ್ತಾ ಮಕ್ಕಳು ಧೈರ್ಯದಿಂದ ಮುನ್ನಡೆಯಬೇಕು.ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಶಾಲೆಯಾದರೂ ಸೂರ್ಯನಾರಾಯಣ ಶಾಲೆ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು ಈ ಶಾಲೆಯ ಗುಣಾತ್ಮಕ ಶಿಕ್ಷಣ ಮತ್ತು ಶಿಕ್ಷಕರ ಬಗ್ಗೆ ತಿಳಿಯುವುದು ಎಂದರು. ಚಟುವಟಿಕೆಗಳ ಮೂಲಕ ತರಬೇತಿ ನೀಡಿದ್ದು ವಿಶೇಷವಾಗಿತ್ತು. ಪ್ರೌಢ ಶಾಲೆ ಯ ಹಳೆಯ ವಿದ್ಯಾರ್ಥಿನಿಯಾದ ಸುಮನ್ ಶ್ರೀಕಾಂತ ಹೆಗಡೆ ಹಾಗೂ 1972 ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಶ್ರೀಮತಿ ಸುಮಂಗಲಾ ಹೆಗಡೆ ಜೊತೆಗಿದ್ದರು. ಎಸ್. ಎಂ. ಹೆಗಡೆ ಹುಡೇಲಕೊಪ್ಪ ಅಧ್ಯಕ್ಷತೆ ವಹಿಸಿದ್ದರು.
ಪ್ರಾರಂಭದಲ್ಲಿ ಮುಖ್ಯೋಪಾಧ್ಯಾಯ ಗಣೇಶ ಭಟ್ಟ ವಾನಳ್ಳಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಈ ಕಾರ್ಯಕ್ರಮ ಮಕ್ಕಳ ಮನಸ್ಸಿನ ವಿಕಸನ ಕ್ಕೆ ಪೂರಕ ಅಲ್ಲದೇ ಹಳೆಯ ವಿದ್ಯಾರ್ಥಿಗಳೇ ಶಾಲೆಯ ಬೆನ್ನೆಲುಬು ಎಂದರು. ಕೊನೆಯಲ್ಲಿ ಅತಿಥಿ ಗಳನ್ನು ಗೌರವಿಸಲಾಯಿತು.ಶಿಕ್ಷಕ ಪ್ರಸಾದ್ ಹೆಗಡೆ ನಿರೂಪಿಸಿದರೆ, ಶಿಕ್ಷಕ ಗಣೇಶ್ ಸಾಯಿಮನೆ ವಂದಿಸಿದರು.