Slide
Slide
Slide
previous arrow
next arrow

ಮಗುವಿನ ಸಮಗ್ರ ಬೆಳವಣಿಗೆಗೆ ಎದೆಹಾಲು ಅತ್ಯಗತ್ಯ: ನೇತ್ರಾವತಿ ನಾಯ್ಕ

300x250 AD

ಕುಮಟಾ: ಮಗುವಿನ ಸಮಗ್ರ ಬೆಳವಣಿಗೆಗೆ ಎದೆಹಾಲು ಅತ್ಯಗತ್ಯ. ಸ್ತನ್ಯಪಾನವು ಮಗು ಮತ್ತು ತಾಯಿಯ ಭಾವನೆಗಳನ್ನು ಬೆಸೆಯುವ ಅನುಭವವೂ ಹೌದು ಎಂದು ಹಿರಿಯ ಆರೋಗ್ಯ ಸಹಾಯಕಿ ನೇತ್ರಾವತಿ ನಾಯ್ಕ ಹೇಳಿದರು.

ತಾಲೂಕಿನ ದೀವಗಿಯ ಗ್ರಾ.ಪಂ ಸಭಾಭವನದಲ್ಲಿ ವಿಶ್ವ ಸ್ಥನ್ಯಪಾನ ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ವಿಶೇಷ ಆರೋಗ್ಯ ಮಾಹಿತಿ ನೀಡಿ ಮಾತನಾಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಎದೆಹಾಲು ಕುಡಿಯುವ ಶಿಶುಗಳ ಬುದ್ಧಿವಂತಿಕೆ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ. ಎದೆಹಾಲು ಕುಡಿಯದ ಮಕ್ಕಳಿಗೆ ಹೋಲಿಸಿದರೆ, ಸ್ತನ್ಯಪಾನ ಮಾಡುವ ಮಕ್ಕಳು ಅತಿತೂಕ, ಬೊಜ್ಜು ಮತ್ತು ಡಯಾಬಿಟಿಸ್‌ಗಳಿಂದ ಬಳಲುವ ಸಾಧ್ಯತೆಯೂ ಕಡಿಮೆ.

ನವಜಾತ ಶಿಶುಗಳಿಗೆ ಎದೆಹಾಲು ಅತ್ಯುತ್ತಮ ಆಹಾರವಷ್ಟೇ ಅಲ್ಲ, ನಿಸರ್ಗವೇ ಕೊಟ್ಟಿರುವ ಔಷಧಿಯೂ ಹೌದು. ಮಕ್ಕಳಲ್ಲಿ ಕಂಡುಬರುವ ಹಲವು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಎದೆಹಾಲು ನೆರವಾಗುತ್ತದೆ. ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪ್ರತಿಕಾಯಗಳು ಎದೆಹಾಲಿನಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇರುತ್ತವೆ. ಹೀಗಾಗಿ ಮಗುವಿಗೆ ಕನಿಷ್ಠ 6 ತಿಂಗಳು ತುಂಬುವವರೆಗಾದರೂ ಎದೆಹಾಲನ್ನು ಕುಡಿಸಬೇಕು. ವೈರಸ್ ಮತ್ತು ಇತರ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು, ಹಲವು ರೀತಿಯ ಸೋಂಕು ಮತ್ತು ಅಲರ್ಜಿಯಿಂದ ಮಗುವನ್ನು ಕಾಪಾಡಲು ಇದು ನೆರವಾಗುತ್ತದೆ ಎಂದರು.

ಎದೆಹಾಲು ಕುಡಿಯುವ ಶಿಶುಗಳಲ್ಲಿ ಉಸಿರಾಟದ ತೊಂದರೆ, ಕಿವಿಯ ಸೋಂಕು, ವಾಂತಿ-ಬೇಧಿಯAಥ ಸಮಸ್ಯೆಗಳು ಕಡಿಮೆ. ಎದೆಹಾಲಿನ ಬದಲು ಇತರ ಆಹಾರ ಸೇವಿಸುವ ಮಕ್ಕಳಲ್ಲಿ ಇಂತ ಸಮಸ್ಯೆ ಹೆಚ್ಚು. ಎದೆಹಾಲು ಕೊಡುವುದು ತಾಯಿಯ ಆರೋಗ್ಯಕ್ಕೂ ಒಳ್ಳೆಯದು. ಏಕೆಂದರೆ ಇದರಿಂದ ತಾಯಿಗೆ ಸ್ತನ ಮತ್ತು ಅಂಡಾಶಯ ಕ್ಯಾನ್ಸರ್‌ನ ಅಪಾಯ ಕಡಿಮೆಯಾಗುತ್ತದೆ ಎಂದರು.

300x250 AD

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕತಗಾಲ ವಲಯ ಮೇಲ್ವಿಚಾರಕಿ ಮಮತಾ ಗೌಡ ಮಾತನಾಡಿ, ತಾಯಿ ಮಗುವಿಗೆ ಎದೆಹಾಲುಣಿಸುವ ಪ್ರಕ್ರಿಯೆ ಶತ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಇದರಲ್ಲಿ ಹೊಸತೇನೂ ಇಲ್ಲ. ಆದರೆ, ನಾಗರಿಕತೆ ಬೆಳೆದಂತೆ ಮಹಿಳೆಯ ಕಾರ್ಯಕ್ಷೇತ್ರವೂ ಬದಲಾಗುತ್ತಿವೆ. ಈ ಬದಲಾವಣೆಗಳು ತಾಯಿ ಮಗುವಿನ ಸಂಬAಧದ ಮೇಲೂ ಆಗುತ್ತಿದೆ.ಹೀಗಾಗಿ ವಿಶ್ವ ಸ್ಥನ್ಯಪಾನ ದಿನದ ಮೂಲಕ ಅವುಗಳ ಮಹತ್ವ ತಿಳಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ದೀವಗಿ ಗ್ರಾ.ಪಂ ಅಧ್ಯಕ್ಷೆ ನಾಗವೇಣಿ ಅಂಬಿಗ, ಪಿಡಿಓ ರೇಖಾ ನಾಯಕ,ದೀವಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕಿ ದೀಪಿಕಾ ನಾಯ್ಕ, ಜ್ಯೋತಿ ಪಟಗಾರ, ದೀವಗಿ ಹಾಗೂ ಅಳಕೋಡ ಗ್ರಾ.ಪಂ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಮಹಿಳೆಯರು ಇದ್ದರು.

Share This
300x250 AD
300x250 AD
300x250 AD
Back to top