Slide
Slide
Slide
previous arrow
next arrow

ಬಾಲಮಂದಿರ ಪ್ರೌಢಶಾಲೆಯಲ್ಲಿ ‘ವ್ಯಸನ ಮುಕ್ತ ದಿನಾಚರಣೆ’

300x250 AD

ಕಾರವಾರ: ನಗರದ ಬಾಲಮಂದಿರ ಪ್ರೌಢಶಾಲೆಯಲ್ಲಿ ‘ವ್ಯಸನ ಮುಕ್ತ’ ದಿನವನ್ನು ಆಚರಿಸಲಾಯಿತು. ಆರಂಭದಲ್ಲಿ ಮಾದಕ ದ್ರವ್ಯಗಳನ್ನು ಯಾರೂ ಸೇವಿಸಬಾರದು ಎಂದು ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿಯನ್ನು ಮಾಡಿಸಲಾಯಿತು.

ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಮಾತನಾಡಿ, ಇಂದು ಅನೇಕ ಜನರು ಮಾದಕ ವ್ಯಸನಕ್ಕೆ ಗುರಿಯಾಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿ ದಿಶೆಯಿಂದಲೇ ಎಲ್ಲರೂ ದುಶ್ಚಟಗಳಿಂದ ಮುಕ್ತರಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ನುಡಿದರು.

300x250 AD

ಈ ಸಂದರ್ಭದಲ್ಲಿ ಶಿಕ್ಷಕ ನಜಿರುದ್ದೀನ್ ಸೈಯದ್, ಭಾರತಿ ಐಸಾಕ್ ಮತ್ತು ವಿದ್ಯಾರ್ಥಿಗಳಾದ ಆದಿತ್ಯ ಎ.ನಾಯ್ಕ ಮಾದಕ ವ್ಯಸನದಿಂದಾಗುವ ದುಷ್ಪರಿಣಾಮದ ಕುರಿತು ಮಾತನಾಡಿದರು. ಹಂಸಲೇಖ ನಾಯ್ಕ ಅವರು ವ್ಯಸನಮುಕ್ತ ಕುರಿತಾದ ವಿಡಿಯೋ ಚಿತ್ರವನ್ನು ಪ್ರದರ್ಶಿಸಿದರು. ಶಿಕ್ಷಕಿಯರಾದ ಸೀಮಾ ರೇವಣಕರ, ರಾಜೇಶ್ವರಿ ಹರಿಕಂತ್ರ ಹಾಗೂ ನಾಹಿದಾ ಹನಗಿ ಉಪಸ್ಥಿತರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು.

Share This
300x250 AD
300x250 AD
300x250 AD
Back to top