ಅಂಕೋಲಾ: ತಾಲೂಕು ನಾಮಧಾರಿ ಆರ್ಯ ಈಡಿಗ ಅಭಿವೃದ್ಧಿ ಸಂಘ ಮತ್ತು ಕರ್ನಾಟಕ ಆರ್ಯ ಈಡಿಗ (ನಾಮಧಾರಿ) ಸಂಘದ ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಟ್ಟಣದ ಕಾಕರಮಠದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 14ರಂದು ಪುರಸ್ಕಾರ ನಡೆಯಲಿದೆ ಎಂದು ತಾಲೂಕು ನಾಮಧಾರಿ ಆರ್ಯ ಈಡಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ ಹೇಳಿದರು.
ಪಟ್ಟಣದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಆರ್ಯ ಈಡಿಗ (ನಾಮಧಾರಿ) ಸಂಘದ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ತಾಲೂಕಿನ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿಯಲ್ಲಿ ಶೇ.95 ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90 ಅಂಕಕ್ಕಿಂತ ಹೆಚ್ಚಿಗೆ ಅಂಕ ಪಡೆದವರನ್ನು ಪುರಸ್ಕರಿಸಿ ಗೌರವಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ದೃಢೀಕರಣ ಅಂಕಪಟ್ಟಿ, ಆಧಾರ್ ಕಾರ್ಡ್, ಭಾವಚಿತ್ರ, ಜಾತಿ ಪ್ರಮಾಣಪತ್ರವನ್ನು ಆಗಸ್ಟ್ 10ರಂದು ಸಂಜೆ 5 ಗಂಟೆಯೊಳಗೆ ಮಠಾಕೇರಿಯ ನ್ಯೂ ಪ್ರಿಂಟರ್ಸ್ ಅಥವಾ ಕೆ.ಸಿ.ರಸ್ತೆಯ ಆಮಂತ್ರಣ ಗ್ರಾಫಿಕ್ಸ್ ಗೆ ತಲುಪಿಸಬೇಕು. ವಾಟ್ಸಾಪ್ ಮೂಲಕವೂ ಕೂಡ ಕಳುಹಿಸಬಹುದು ಎಂದರು.
ನಾಗರಾಜ ಮಂಜಗುಣಿ 9844384013 ಆಮಂತ್ರಣ ಗ್ರಾಫಿಕ್ಸ್, ಹೊನ್ನಪ್ಪ ಎಂ. ನಾಯ್ಕ 9448317770 ನ್ಯೂ ಪ್ರಿಂಟರ್ಸ್ , ನಾಗೇಶ ವಿ. ನಾಯ್ಕ ಆಚಾ 9482555537, ಮೋಹನ ಎಚ್. ನಾಯ್ಕ 9448947163ಗೆ ಸಂಪರ್ಕಿಸಲು ಕೋರಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಶ್ರೀಧರ ನಾಯ್ಕ, ಬಾಲಕೃಷ್ಣ ನಾಯ್ಕ, ಉಮೇಶ ನಾಯ್ಕ ಗುಡಿಗಾರಗಲ್ಲಿ, ವಿಶ್ವನಾಥ ನಾಯ್ಕ, ಗಣಪತಿ ನಾಯ್ಕ, ಏಕನಾಥ ನಾಯ್ಕ, ಮೋಹನ ನಾಯ್ಕ, ಉಮೇಶ ಎನ್.ನಾಯ್ಕ, ರಾಜೇಶ ಎಲ್.ನಾಯ್ಕ, ವೆಂಕಟ್ರಮಣ ವಿ.ನಾಯ್ಕ, ವೆಂಕಟ್ರಮಣ ಕೆ.ನಾಯ್ಕ, ಹೊನ್ನಪ್ಪ ಎಚ್.ನಾಯ್ಕ, ಗೋವಿಂದ್ರಾಯ ನಾಯ್ಕ, ಕೃಷ್ಣಾ ನಾಯ್ಕ, ನಾಗೇಶ ಎಸ್.ನಾಯ್ಕ, ಮಂಜುನಾಥ ಕೆ. ನಾಯ್ಕ, ಮೋಹನ ನಾಯ್ಕ ದಂಡೆಭಾಗ, ನಾರಾಯಣ ಪಿ.ನಾಯ್ಕ, ರಮೇಶ ಜಿ.ನಾಯ್ಕ ಇದ್ದರು.