ಸಿದ್ದಾಪುರ: ಶಾಲಾ ಹಂತದಲ್ಲಿ ಸಂಸತ್ತಿನ ಪರಿಕಲ್ಪನೆ ವಿದ್ಯಾರ್ಥಿಗಳಿಗೆ ದೊರೆಯಬೇಕು. ಶಾಲೆಗಳಲ್ಲಿ ವಿದ್ಯಾರ್ಥಿ ಸಂಸತ್ತು ರಚನೆಯ ಮೂಲಕ ಶಿಸ್ತು, ಸಂಯಮ, ಜವಾಬ್ದಾರಿಯ ಅರಿವು ಮೂಡಲು ಸಾಧ್ಯ ಎಂದು ಸ್ಥಳೀಯ ಆಶಾಕಿರಣ ಟ್ರಸ್ಟ್ ಉಪಾಧ್ಯಕ್ಷ ಸಿ.ಎಸ್. ಗೌಡರ್ ಹೆಗ್ಗೋಡಮನೆ ಹೇಳಿದರು.
ಅವರು ಜೆ.ಎಂ.ಆರ್. ಅಂಧ ಮಕ್ಕಳ ವಸತಿ ಶಾಲೆಯಲ್ಲಿ ರಚಿತವಾದ 2022-23 ನೇ ಸಾಲಿನ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿ, ನಿವೃತ್ತ ಮುಖ್ಯಶಿಕ್ಷಕ ಹಾಗೂ ಸಾಹಿತಿಗಳಾದ ಜಿ.ಜಿ. ಹೆಗಡೆ ಬಾಳಗೋಡರವರು ಮಾತನಾಡಿ ದೇಶಪ್ರೇಮದ ಭಾವನೆಯನ್ನು ವಿದ್ಯಾಭ್ಯಾಸದ ಜತೆ ಬೆಳೆಸಿಕೊಳ್ಳಬೇಕು. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳ ಮೂಲಕ ವಿಶೇಷ ಚೇತನರು ಸಹ ಪ್ರಗತಿಯ ಮುಖ್ಯವಾಹಿನಿಗೆ ಬರಬೇಕು ಎಂದರು.
ಆಶಾಕಿರಣ ಟ್ರಸ್ಟನ ಟ್ರಸ್ಟೀ ವಾಸುದೇವ ಎಸ್.ಶೇಟ್ ಅತಿಥಿಯಾಗಿ ಭಾಗವಹಿಸಿದ್ದರು. ವಿದ್ಯಾರ್ಥಿ ಸಂಸತ್ತಿನ ಪ್ರತಿಜ್ಞಾವಿಧಿ ಬೋಧನೆಯನ್ನು ಮುಖ್ಯಶಿಕ್ಷಕಿ ಕಮಲಾಕ್ಷಿ ನಾಯ್ಕ ಬೋಧಿಸಿದರು. ಪ್ರಧಾನ ಕಾರ್ಯದರ್ಶಿ ನಾಗರಾಜ ಮರಾಠೆ ಮಾತನಾಡಿದರು.
ಬ್ರೈಲ್ ಶಿಕ್ಷಕಿ ರೇಖಾ ಸ್ವಾಗತಿಸಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ಬ್ರೈಲ್ ಶಿಕ್ಷಕಿ ಗೀತಾ ವಂದಿಸಿದರು. ಶಿಕ್ಷಕಿ ಆರತಿ ಪಂಡಿತ ವಂದಿಸಿದರು.