Slide
Slide
Slide
previous arrow
next arrow

ದಿ.ಅಜಿತ ನಾಯಕರ ಹೋರಾಟದ ಬದುಕು,ಸಮಾಜಮುಖಿ ವ್ಯಕ್ತಿತ್ವ ಸದಾ ಸ್ಪೂರ್ತಿ: ಭಾರತಿ ನಾಯಕ

300x250 AD

ದಾಂಡೇಲಿ: ದಿ.ಅಜಿತ ನಾಯಕ ಅವರ ಹೋರಾಟದ ಬದುಕು ಮತ್ತು ಸಮಾಜಮುಖಿ ವ್ಯಕ್ತಿತ್ವ ನಮಗೆ ಸದಾ ಸ್ಪೂರ್ತಿ. ದಾಂಡೇಲಿ ತಾಲ್ಲೂಕು ರಚನೆಗಾಗಿ ಹಮ್ಮಿಕೊಂಡಿದ್ದ ಹೋರಾಟದ ನಾಯಕತ್ವವನ್ನು ವಹಿಸಿ, ಸರ್ವರ ಸಹಕಾರದಲ್ಲಿ ನಿರಂತರವಾದ ಹೋರಾಟವನ್ನು ಹಮ್ಮಿಕೊಂಡಿರುವುದು ಸದಾ ಸ್ಮರಣೀಯವಾಗಿದೆ ಎಂದು ದಿ.ಅಜಿತ ನಾಯಕರವರ ಧರ್ಮಪತ್ನಿ ಭಾರತಿ ನಾಯಕ ಹೇಳಿದರು.

ಅವರು ಬುಧವಾರ ನಗರದ ಬಸ್ ನಿಲ್ದಾಣದ ಹತ್ತಿರ ದಾಂಡೇಲಿ ತಾಲ್ಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ದಿ.ಅಜಿತ ನಾಯಕರವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಗಲಿದ ಅಜಿತ ನಾಯಕರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು. ದಾಂಡೇಲಿಯ ಜನತೆ ಅಜಿತ ನಾಯಕರವರನ್ನು ಸದಾ ಸ್ಮರಿಸಿಕೊಳ್ಳುತ್ತಿದ್ದಾರೆ. ಕುಟುಂಬದವರಿಗೆ ಆದಂತೆ ನಗರದ ಜನತೆಗೂ ಅವರ ಅಗಲಿಕೆ ಬಹಳಷ್ಟು ನೋವು ತಂದಿದೆ. ದಾಂಡೇಲಿ ತಾಲ್ಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯವರು ಪ್ರತಿವರ್ಷ ಅವರ ಪುಣ್ಯಸ್ಮರಣೆಯನ್ನು ಹಮ್ಮಿಕೊಳ್ಳುವ ಮೂಲಕ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಅಜಿತ ನಾಯಕರ ಕುಟುಂಬಕ್ಕೆ ಸದಾ ಇರಲೆಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ದಾಂಡೇಲಿ ತಾಲ್ಲೂಕು ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್, ಪ್ರಮುಖರುಗಳಾದ ಫಿರೋಜ್ ಪಿರ್ಜಾದೆ, ಆರ್.ವಿ.ಗಡೆಪ್ಪನವರ, ಬಾಬಣ್ಣ ಶ್ರೀವಾತ್ಸವ, ಗೌರೀಶ ಬಾಬ್ರೇಕರ, ರೋಶನ್ ಬಾವಾಜಿ, ಮುಜೀಬಾ ಛಬ್ಬಿ, ಲೀಲಾವತಿ ಕೊಳಚೆ, ಸುನೀತಾ ಬಾಂದೇಕರ ಮೊದಲಾದವರು ದಿ.ಅಜಿತ ನಾಯಕ ಅವರ ಹೋರಾಟದ ಬದುಕನ್ನು ವಿವರಿಸಿ, ಅವರ ಅಗಲಿಕೆ ದಾಂಡೇಲಿಗೆ ತುಂಬಲಾರದ ನಷ್ಟ ಎಂದು ಹೇಳಿ, ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು.

300x250 AD

ಅಜಿತ ನಾಯಕ ಅವರ ಸುಪುತ್ರ ಪ್ರಜ್ವಲ್ ನಾಯಕ ಅವರು ತಂದೆಯವರ ಆದರ್ಶಗಳೆ ನಮಗೆ ದಾರಿದೀಪ ಎಂದರು. ಈ ಸಂದರ್ಭದಲ್ಲಿ ಪ್ರಮುಖರುಗಳಾದ ಸೈಯದ್ ಅಬೀದ್, ಎಸ್.ಎಸ್.ಪೂಜಾರ, ಬಲವಂತ ಬೊಮ್ಮನಳ್ಳಿ, ಗೌಸ್ ಖತೀಬ್, ರಫೀಕ್ ಹುದ್ದಾರ, ರವಿ ಗಾಂವಕರ, ಅನಂತ್ರಾಜ ನಾಯಕ, ಬಾಬಾಸಾಬ ಜಮಾದಾರ, ರವಿ ಚೌವ್ಹಾಣ್, ಅನ್ವರ್ ಪಠಾಣ್, ಸಾಧಿಕ್ ಮುಲ್ಲಾ, ಪೆರುಮಾಳ, ನೀಲಾ ಮಾದರ, ರೇಷ್ಮಾ ಮೆಟಗುಡ್ ಮತ್ತು ಸಮಿತಿ ಸದಸ್ಯರುಗಳು ಹಾಗೂ ದಿ. ಅಜಿತ ನಾಯಕ ಪರಿವಾರದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top