ಕಾರವಾರ: ವಿಶ್ವ ಕಾಂಡ್ಲಾ ದಿನದ ಅಂಗವಾಗಿ ತಾಲೂಕಿನ ಕಾಳಿಮಾತಾ ನಡುಗಡ್ಡೆಯಲ್ಲಿ ಕರಾವಳಿ ಮತ್ತು ಸಾಗರ ಪರಿಸರ ವ್ಯವಸ್ಥೆ ಕಾರವಾರ ವಿಭಾಗದಿಂದ ಕಾಂಡ್ಲಾ ಕೋಡು ನಾಟಿ ನಡೆಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ್ ಕೆ. ಪಾಲ್ಗೊಂಡು ಮಾತನಾಡಿ, ಕಾಂಡ್ಲಾ ಜೀವಾವೈವಿಧ್ಯತೆ ಬಗ್ಗೆ ತಿಳಿಸಿದರು. ಕಡಲಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ, ಮಾತನಾಡಿ ಕಾಂಡ್ಲಾ ಸೂಕ್ಷ್ಮ ಪರಿಸರ ವ್ಯವಸ್ಥೆ ಆಗಿದ್ದು, ಅದರ ರಕ್ಷಣೆ ಕಾರ್ಯ ನಮ್ಮ ಕರ್ತವ್ಯ ಎಂದು ತಿಳಿಸಿದರು.
ಈ ವೇಳೆ ಕಾಂಡ್ಲಾ ಕೋಡುಗಳನ್ನು ಕಡಲಜೀವ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳು ಸಾಂಕೇತಿಕವಾಗಿ ನಾಟಿ ಮಾಡಿ, ಕಾಳಿಮಾತಾ ನಡುಗಡ್ಡೆಯ ಕಾಂಡ್ಲಾ ಜೀವವೈವಿಧ್ಯತೆ ಬಗ್ಗೆ ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಕರಾವಳಿ ಮತ್ತು ಸಾಗರ ಪರಿಸರ ವ್ಯವಸ್ಥೆ ವಯಲ ಅರಣ್ಯಾಧಿಕಾರಿ ಪ್ರಮೋದ್ ಬಿ. ಸ್ವಾಗತಿಸಿದರು. ಡಿಆರ್ಎಫ್ಒ ಚಂದ್ರಶೇಖರ ಕಟ್ಟಿಮನಿ ವಂದನಾರ್ಪಣೆ ಮಾಡಿದರು.