Slide
Slide
Slide
previous arrow
next arrow

ಮಹಾಂತೇಶ ರೇವಡಿಗೆ ಲಯನ್ಸ್ ಮಲ್ಟಿಪಲ್ ಡಿಸ್ಟ್ರಿಕ್ಟ್ ಅವಾರ್ಡ್

300x250 AD

ಅಂಕೋಲಾ: ತಾಲೂಕಿನ ನಿವೃತ್ತ ಗ್ರಂಥಪಾಲಕ, ಸಾಮಾಜಿಕ ಸೇವೆ, ಬರಹ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಲಯನ್ಸ್ ಕ್ಲಬ್ ಕರಾವಳಿಯ ಹಿರಿಯ ಸದಸ್ಯ ಮಹಾಂತೇಶ ರೇವಡಿಯವರಿಗೆ 600 ಕ್ಲಬ್‌ಗಳ ವ್ಯಾಪ್ತಿ ಹೊಂದಿರುವ ಪ್ರತಿಷ್ಠಿತ ಲಯನ್ಸ್ ಮಲ್ಟಿಪಲ್ ಡಿಸ್ಟ್ರಿಕ್ಟ್ ಪ್ರಶಸ್ತಿ ದೊರತಿದೆ.

ಅವರು 2020-21ನೇ ಸಾಲಿನ ಲಯನ್ಸ್ ಡಿಸ್ಟ್ರಿಕ್ಟ್ 317ಬಿಯ ಎಡಿಶನಲ್ ಡಿಸ್ಟ್ರಿಕ್ಟ್ ಕ್ಯಾಬಿನೆಟ್ ಸೆಕ್ರೆಟರಿಯಾಗಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಗದಗಿನಲ್ಲಿ ಇತ್ತೀಚಿಗೆ ಜರುಗಿದ ಅದ್ಧೂರಿ ಡಿಸ್ಟ್ರಿಕ್ಟ್ ಕ್ಯಾಬಿನೆಟ್ ಸಮಾರಂಭದಲ್ಲಿ ನಿಕಟಪೂರ್ವ ಪ್ರಾಂತಪಾಲ ಗಿರೀಶ ಕುಚಿನಾಡ ಈ ಪ್ರಶಸ್ತಿ ಪ್ರದಾನ ಮಾಡಿದರು. ಲಯನ್ಸ್ ಪ್ರಮುಖರು ಗೋವಾ ಹಾಗೂ ಕರ್ನಾಟಕದ ಬಹುತೇಕ ಜಿಲ್ಲೆಗಳ ಲಯನ್ಸ್ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top