ದಾಂಡೇಲಿ: ನಗರದ ಪೊಲೀಸ್ ಠಾಣೆಯ ಹತ್ತಿರ ಬರ್ಚಿ ರಸ್ತೆಯ ಬದಿಯಲ್ಲಿರುವ ಗಟಾರವೊಂದು ತ್ಯಾಜ್ಯ ಹಾಗೂ ಕಸ ಕಡ್ಡಿಯಿಂದ ತುಂಬಿರುವುದರಿಂದ ಮಳೆ ನೀರು ಮತ್ತು ತ್ಯಾಜ್ಯ ನೀರು ಸರಾಗವಾಗಿ ಹರಿಯಲಾಗದೇ ರಸ್ತೆಯಿಡಿ ಹರಿಯುತ್ತಿದ್ದು ಸಾಕಷ್ಟು ತೊಂದರೆಯಾಗತೊಡಗಿದೆ.
ಡೆಂಗ್ಯೂ, ಹಳದಿ ಕಾಮಾಲೆಯಿಂದ ಬಸವಳಿದಿರುವ ನಗರದ ಜನತೆಗೆ ಇಲ್ಲಿ ತ್ಯಾಜ್ಯ ಹಾಗೂ ಮಳೆ ನೀರಿನಿಂದ ತುಂಬಿಕೊಂಡಿರುವ ಗಟಾರದ ಈ ಅಸ್ವಚ್ಚತೆಯಿಂದಾಗಿ ಸಾಂಕ್ರಮಿಕ ರೋಗ ಹರಡುವ ಭಯ ಕಾಡತೊಡಗಿದೆ. ಇಲ್ಲಿ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯಿದ್ದು, ಸಿಪಿಐ ಕಚೇರಿಯೂ ಇಲ್ಲೆ ಇದೆ. ಇದೇ ರಸ್ತೆಯ ಮೂಲಕ ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಪ್ರತಿದಿನ ಹೋಗಿ ಬರುತ್ತಿದ್ದಾರೆ. ಇನ್ನೂ ಸಾರ್ವಜನಿಕರ ಓಡಾಟವೂ ಈ ರಸ್ತೆಯಲ್ಲಿ ಹೆಚ್ಚಿರುವುದರಿಂದ ಇಲ್ಲಿ ಸ್ವಚ್ಚತೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ನಗರ ಸಭೆಗೆ ಆಗ್ರಹಿಸಿದ್ದಾರೆ.