• first
  second
  third
  previous arrow
  next arrow
 • 38 ವರ್ಷದ ಸುದೀರ್ಘ ಸೇವೆಯಿಂದ ಪೆದ್ದಣ್ಣ ನಿವೃತ್ತ

  300x250 AD

  ದಾಂಡೇಲಿ: ಸ್ಥಳೀಯ ನಗರಸಭೆಯಲ್ಲಿ ಕಳೆದ 38 ವರ್ಷದಿಂದ ಪೌರಕಾರ್ಮಿಕನಾಗಿ ಶಿಸ್ತಿನಿಂದ ಸೇವೆ ಸಲ್ಲಿಸಿ ಶಿಸ್ತಿನ ಸಿಪಾಯಿ ಎಂದೇ ಹೆಸರು ಪಡೆದಿದ್ದ ಪೆದ್ದಣ್ಣ ಹರಿಜನ ಸೇವೆಯಿಂದ ನಿವೃತ್ತರಾಗಿದ್ದಾರೆ.

  ನಗರದ 14ನೇ ಬ್ಲಾಕಿನ ಭಾಗ್ಯಮಂದಿರದ ನಿವಾಸಿಯಾಗಿರುವ ಪೆದ್ದಣ್ಣ ಮಾರೆಪ್ಪ ಹರಿಜನ ಅವರು ತನ್ನ ಇಡೀ ವೃತ್ತಿ ಬದುಕಿನಲ್ಲಿ ಅತೀ ಕಡಿಮೆ ರಜೆಯನ್ನು ಪಡೆದುಕೊಂಡ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  300x250 AD

  ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಿ, ಮೇಲಾಧಿಕಾರಿಗಳ ಗೌರವಕ್ಕೆ ಪಾತ್ರರಾದ ಪೆದ್ದಣ್ಣ ಮಾರೆಪ್ಪ ಹರಿಜನ ಅವರ ನಿವೃತ್ತ ಜೀವನಕ್ಕೆ ನಗರ ಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸದಸ್ಯರು, ಪೌರಾಯುಕ್ತರು, ನಗರ ಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ತುಂಬು ಹೃದಯದಿಂದ ಶುಭ ಕೋರಿ, ಅವರ ಸೇವಾ ದಕ್ಷತೆಯನ್ನು ಕೊಂಡಾಡಿದ್ದಾರೆ.

  Share This
  300x250 AD
  300x250 AD
  300x250 AD
  Back to top