ಶಿರಸಿ: ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಲಯನ್ಸ್ ಸಭಾಭವನದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ಜು.14ರಂದು ಹಮ್ಮಿಕೊಳ್ಳಲಾಗಿತ್ತು. ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಲಯನ್ಸ್ ಪ್ರೊ.ಎನ್.ವಿ. ಜಿ. ಭಟ್ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಅಧ್ಯಕ್ಷೀಯ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿ ಗೌರವಕಾರ್ಯದರ್ಶಿ ಲಯನ್. ಪ್ರೊ.ರವಿ ನಾಯಕ
ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿ ಶುಭಾಶಯ ಕೋರಿದರು.
ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಎಂ.ಜೆ.ಎಫ್. ಲಯನ್ ಪ್ರಭಾಕರ ಹೆಗಡೆ, ಉಪಸ್ಥಿತರಿದ್ದರು. ಸಂಗೀತ ಶಿಕ್ಷಕಿ ಶ್ರೀಮತಿ ದೀಪಾ ಶಶಾಂಕ ಹೆಗಡೆ ನೇತ್ರತ್ವದಲ್ಲಿ ಲಯನ್ಸ್ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮುಖ್ಯ ಶಿಕ್ಷಕರಾದ ಶಶಾಂಕ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ಹಾಗೂ ವಿದ್ಯಾರ್ಥಿ ಸಂಸತ್ತಿನ ಪರಿಚಯದ ಜೊತೆಗೆ ಎಲ್ಲರನ್ನು ಸ್ವಾಗತಿಸಿದರು. ಸಹಶಿಕ್ಷಕಿ ಕುಮಾರಿ ದಿವ್ಯಾ ಹೆಗಡೆ ವಂದಿಸಿದರು.
ಶಾಲಾ ವಿದ್ಯಾರ್ಥಿಯರಾದ ಕುಮಾರಿ ವಾಸವಿ ಜೋಶಿ ಹಾಗೂ ಭೂಮಿಕಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಲಿಯೋ ಕ್ಲಬ್ನ ಸಹಕಾರದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಶಾಲಾ ಸಂಸತ್ತಿನ ಅಧ್ಯಕ್ಷರಾಗಿ ಕುಮಾರಿ ಸ್ತುತಿ ತುಂಬಾಡಿ, ಉಪಾಧ್ಯಕ್ಷರಾಗಿ ಕುಮಾರಿ ಶ್ರೀಲಕ್ಷ್ಮಿ ಹೆಗಡೆ, ಶಾಲಾ ಶಿಸ್ತಿನ ಮಂತ್ರಿಗಳಾಗಿ ಕುಮಾರ ವಾದಿರಾಜ ಚಪ್ಪರ, ಕುಮಾರಿ ತೈಬಾ ತಬಸುಮ್, ಕ್ರೀಡಾ ಮಂತ್ರಿಗಳಾಗಿ ಕುಮಾರ ಸಾತ್ವಿಕ್ ಜಿ. ಭಟ್, ಕುಮಾರಿ ಸೃಷ್ಠಿ ಪಿ. ಗೌಳಿ, ಸ್ವಚ್ಛತಾ ಮಂತ್ರಿಗಳಾಗಿ ಕುಮಾರ ವಿಭವ ಭಾಗ್ವತ್, ಕುಮಾರ ಪ್ರಥ್ವಿ ಯು. ಹೆಗಡೆ, ಸಾಂಸ್ಕೃತಿಕ ಮಂತ್ರಿಗಳಾಗಿ ಕುಮಾರ ರಿತ್ವಿಕ್ ಲೋಖಂಡೆ, ಕುಮಾರಿ ಶ್ರೇಯಾ ಜಿ. ಬಡಿಗೇರ, ಪ್ರಾರ್ಥನಾ ಮಂತ್ರಿಗಳಾಗಿ ಕುಮಾರ ಶ್ರೇಯಸ್ ಎಂ ಮ್ಯಾಗೇರಿ, ಕುಮಾರಿ ಸಿಂಚನಾ ಡಿ. ಶೆಟ್ಟಿ , ಗ್ರಂಥಾಲಯ ಮಂತ್ರಿಗಳಾಗಿ ಕುಮಾರ ಚಿನ್ಮಯ ನಾಯಕ, ಕುಮಾರಿ ಶ್ರಾವ್ಯಾ ಜಿ. ಶೆಟ್ಟಿ, ಆರೋಗ್ಯ ಮಂತ್ರಿಗಳಾಗಿ ಕುಮಾರ ಕೌಶಿಕ ನಾಯ್ಕ, ಕುಮಾರಿ ಭುವನಾ ಜಿ. ಹೆಗಡೆ, ವಿಜ್ಞಾನ ಕ್ಲಬ್ ಮಂತ್ರಿಗಳಾಗಿ ಕುಮಾರ ಭಾರ್ಗವ ಎಸ್ ಹೆಗಡೆ, ಕುಮಾರಿ ನೀತಿ ಅಂಕೋಲೆಕರ, ಪರಿಸರ ಕ್ಲಬ್ ಮಂತ್ರಿಗಳಾಗಿ ಕುಮಾರ ಆದಿತ್ಯ ಕೆ. ಶೇಟ, ಕುಮಾರಿ ಸಾಚಿ ಮೂಳೆ, ಐ.ಟಿ. ಕ್ಲಬ್ ಮಂತ್ರಿಗಳಾಗಿ ಕುಮಾರ ಧೀರಜ ಎಂ. ನಾಯ್ಕ, ಕುಮಾರ ಪ್ರಣವ್ ಗಾಂವ್ಕರ್ , ಸರ್. ಎಂ. ವಿಶ್ವೇಶ್ವರಯ್ಯ ತಂಡದ ನಾಯಕಿಯಾಗಿ ಕುಮಾರ ನ್ಯಾನ್ಸಿ ವಿಶ್ವಕರ್ಮ, ಕಪಿಲ್ ದೇವ್ ತಂಡದ ನಾಯಕಿಯಾಗಿ ಕುಮಾರಿ ಪೂರ್ವಿ ಮುರ್ಡೇಶ್ವರ, ಸುಧಾಮೂರ್ತಿ ತಂಡದ ನಾಯಕನಾಗಿ ಕುಮಾರ ಮನೋಜ ಅರ್ಕಾಚಾರಿ ಹಾಗೂ ಎ.ಪಿ.ಜೆ ಅಬ್ದುಲ್ ಕಲಾಂ ತಂಡದ ನಾಯಕನಾಗಿ ಕುಮಾರ ವಿನಯ ಬೆಹೆರೆ ಆಯ್ಕೆಯಾಗಿರುತ್ತಾರೆ.
ಸಮಾಜ ವಿಜ್ಞಾನ ಶಿಕ್ಷಕರಾದ ಗಣಪತಿ ಗೌಡ, ಶ್ರೀಮತಿ ಗೀತಾ ನಾಯ್ಕ, ಶ್ರೀಮತಿ ರೇಷ್ಮಾ ಮಿರಾಂಡ, ಶ್ರೀಮತಿ ರೇಖಾ ನಾಯ್ಕ ಹಾಗೂ ಎಲ್ಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ವಿದ್ಯಾರ್ಥಿ ಸಂಸತ್ತಿನ ಚುನಾವಣೆಯಲ್ಲಿ ಸಹಕರಿಸಿದರು.