• Slide
    Slide
    Slide
    previous arrow
    next arrow
  • ಗ್ರಂಥಾಲಯಗಳನ್ನು ಬಳಸಿಕೊಂಡು ಬೌದ್ಧಿಕ ಕೌಶಲ್ಯ ಹೆಚ್ಚಿಸಿಕೊಳ್ಳಿ :ಜಗದೀಶ ಕಮ್ಮಾರ

    300x250 AD

    ಯಲ್ಲಾಪುರ:ತಾಲ್ಲೂಕು ಪಂಚಾಯತ ಆವಾರದಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯತ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳಿಗೆ ಶಿಕ್ಷಣ ಫೌಂಡೇಶನ್, ಡೆಲ್ ಟೆಕ್ನಾಲಜಿಸ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಮ ಡಿಜಿ ವಿಕಸನ ತರಬೇತಿಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಪಾಲ್ಗೊಂಡರು.

    ಅವರು ಈ ವೇಳೆ ಮಾತನಾಡಿ, ಇಂದಿನ ಆಧುನಿಕತೆಯ ಡಿಜಿಟಲ್ ವ್ಯವಸ್ಥೆಯು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣವಾಗಲಿದೆ. ವಿದ್ಯಾರ್ಥಿಗಳು ಹೆಚ್ಚೆಚ್ಚು ಗ್ರಂಥಾಲಯಗಳನ್ನು ಬಳಸಿಕೊಂಡು ಬೌದ್ಧಿಕ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

    ಗ್ರಾಮ ಪಂಚಾಯತ ಗ್ರಂಥಾಲಯಗಳನ್ನು ಡಿಜಿಟಲ್‌ಗೊಳಿಸಲಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಅನುಕೂಲವಾಗಲಿದೆ. ವಾರದ ಕೆಲವು ಅವಧಿಯನ್ನು ಡಿಜಿಟಲ್ ಗ್ರಂಥಾಲಯಗಳಲ್ಲಿ ಕಳೆಯಲು ವಿದ್ಯುನ್ಮಾನದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಉಚಿತವಾಗಿ ಈ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಪಡೆದು ಸ್ಪರ್ಧಾತ್ಮಕವಾಗಿ ಪರೀಕ್ಷೆ ಎದುರಿಸಲು ಸಿದ್ದರಾಗಬೇಕು ಎಂದು ಕರೆ ನೀಡಿದರು.

    300x250 AD

    ಪ್ರಾಸ್ತಾವಿಕ ಮಾತನಾಡಿದ ಗ್ರಾಮ ಡಿಜಿ ವಿಕಸನದ ನಿರ್ವಾಹಕರು ಮತ್ತು ತರಬೇತಿಯ ಸಂಪನ್ಮೂಲ ವ್ಯಕ್ತಿ ಶಿವಯ್ಯ ಗೋಡಿಮನಿ, ರಾಜ್ಯದಲ್ಲಿ 1200ಕ್ಕೂ ಹೆಚ್ಚು ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು ಈ ಕಾರ್ಯಕ್ರಮದಡಿಯಲ್ಲಿ ಇ-ಸೇವೆ ಮತ್ತು ಇ -ವಿಷಯಗಳ ಕುರಿತು, ಆರ್ಥಿಕ ಸಾಕ್ಷರತೆಯ ಕುರಿತು, ವ್ಯವಹಾರಿಕ ಇಂಗ್ಲೀಷ, ವೃತ್ತಿ ಮಾರ್ಗದರ್ಶನ ಶೈಕ್ಷಣಿಕ ಕೌಶಲ್ಯ ಆಧರಿಸಿ ತರಬೇತಿಯನ್ನು ನೀಡುತ್ತಿದ್ದೇವೆ. ಉತ್ತರ ಕನ್ನಡದಲ್ಲಿ 80 ಗ್ರಂಥಾಲಯಗಳಿಗೆ ಹಾಗೂ ಯಲ್ಲಾಪುರ ತಾಲ್ಲೂಕಿನಲ್ಲಿ ಆರಂಭಿಕವಾಗಿ 9 ಗ್ರಾಮ ಪಂಚಾಯತ ಗ್ರಂಥಾಲಯಗಳಿಗೆ ಆಂಡ್ರಾಯ್ಡ್ ಮೊಬೈಲ್, ಟಿವಿ, ಕ್ರೋಮ್ ಬುಕ್‌ನ ಜೊತೆಗೆ ಇಂಟರ್ನೆಟ್ ಸೇವೆ ಉಚಿತವಾಗಿ ಒದಗಿಸಲಾಗಿದೆ. ಸ್ಥಳೀಯ ಗ್ರಂಥಪಾಲಕರಿಗೆ ಈ ಕುರಿತು ತರಬೇತಿ ನೀಡಲಾಗುತ್ತಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ವಿದ್ಯುನ್ಮಾನದ ಸಲಕರಣೆಗಳಿಂದ ಹೆಚ್ಚಿನ ಪ್ರಯೋಜನ ಪಡೆದು ಪರಿಣಾಮಕಾರಿ ಅನುಷ್ಠಾನಗೊಳಿಸುವ ಆಶಯ ಹೊಂದಿದ್ದೇವೆ ಎಂದರು.

    ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರು ತರಬೇತಿಯಲ್ಲಿ ಭಾಗವಹಿಸಿ ವಿದ್ಯುನ್ಮಾನದ ಮಾಹಿತಿ ಪರಿಕರಗಳನ್ನು ಪಡೆದರು.

    Share This
    300x250 AD
    300x250 AD
    300x250 AD
    Leaderboard Ad
    Back to top