ಸಿದ್ದಾಪುರ:ತಾಲೂಕಿನ ಗಾಳಿಜಡ್ಡಿ ಸಮೀಪದ ಹಿರೇಕೈನಲ್ಲಿ ಗಾನ ವೈಭವ ಹಾಗೂ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಮ್ಮ ಸಂಸ್ಕೃತಿ, ಪರಂಪರೆ ಉಳಿಯುತ್ತಿರುವುದು ಗ್ರಾಮೀಣ ಪ್ರದೇಶದಲ್ಲಿಯೇ ಆಗಿದೆ. ಯಕ್ಷಗಾನ ನಮ್ಮ ನಾಡಿನ ಹೆಮ್ಮೆಯ ಕಲೆಯಾಗಿದೆ ಎಂದು ಹೇಳಿದರು.
ವಿ.ಚಂದ್ರಶೇಖರ ಭಟ್ಟ ಗಾಳೀಮನೆ ಅಧ್ಯಕ್ಷತೆ ವಹಿಸಿದ್ದರು. ರಘುಪತಿ ಹೆಗಡೆ ಹೂಡೇಹದ್ದ, ಸುಬ್ರಹ್ಮಣ್ಯ ಧಾರೇಶ್ವರ ಉಪಸ್ಥಿತರಿದ್ದರು.
ಸನ್ಮಾನ: ಕಮಲಾಕರ ಹೆಗಡೆ ದಂಪತಿ ಹುಕ್ಲಮಕ್ಕಿ,ಪರಮೇಶ್ವರ ಭಟ್ಟ ದಂಪತಿ ಬಾಳೇಹಳ್ಳಿ, ಎಂ.ಆರ್.ಹೆಗಡೆ ದಂಪತಿ ಕರ್ಕಿಸವಲ್ ಇವರನ್ನು ಕಾರ್ಯಕ್ರಮದ ಸಂಘಟಕರಾದ ಜಿ.ಡಿ.ಹೆಗಡೆ ಹಾಗೂ ಅಶೋಕ ಹೆಗಡೆ ಹಿರೇಕೈ ಸನ್ಮಾನಿಸಿ ಗೌರವಿಸಿದರು.
ನಂತರ ನಡೆದ ಹಿಮ್ಮೇಳ ವೈಭವದಲ್ಲಿ ಭಾಗವತಿಕೆಯಲ್ಲಿ ಸುಬ್ರಹ್ಮಣ್ಯ ಧಾರೇಶ್ವರ, ಕೇಶವ ಹೆಗಡೆ ಕೊಳಗಿ, ಶ್ರೀರಕ್ಷಾ ಹೆಗಡೆ ಸಿದ್ದಾಪುರ, ಮದ್ದಳೆಯಲ್ಲಿ ಶಂಕರ ಭಾಗವತ್ ಯಲ್ಲಾಪುರ, ಎನ್.ಜಿ.ಹೆಗಡೆ ಹಾಗೂ ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸರಕೊಪ್ಪ ಇವರು ಉತ್ತಮ ಸಾಥ್ ನೀಡಿ ಮೆರಗು ನೀಡಿದರು.ಅಕ್ಷಯ ಹೆಗಡೆ, ಅರ್ಪಿತಾ ಭಟ್ಟ ಹಾಗೂ ರವಿಂದ್ರ ಹೆಗಡೆ ಹಿರೇಕೈ ಕಾರ್ಯಕ್ರಮ ನಿರ್ವಹಿಸಿದರು.