ಸಿದ್ದಾಪುರ: ದೈವಜ್ಞ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ದಾವಣಗೆರೆಯ ರಜತ ಮಹೋತ್ಸವ ನೂತನ ಕಟ್ಟಡದ ಉದ್ಘಾಟನೆಯ ಅಂಗವಾಗಿ ಆಯೋಜಿಸಿದ್ದ ಅಖಿಲ ಕರ್ನಾಟಕ ನೃತ್ಯ ಸ್ಪರ್ಧೆಯಲ್ಲಿ ಸಿದ್ದಾಪುರದ ದೈವಜ್ಞ ಸಮಾಜದ ಶ್ರೀರಾಜರಾಜೇಶ್ವರೀ ಮಹಿಳಾ ಮಂಡಳಿಯವರು ಪ್ರದರ್ಶಿಸಿದ ಪೌರಾಣಿಕ ನೃತ್ಯ ರೂಪಕ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಈ ಹಿಂದೆಯೂ ತಮ್ಮ ಮಹಿಳಾ ಮಂಡಳಿಯವರು ಶಿವಮೊಗ್ಗಾದಲ್ಲಿ ಸಂಘಟಿಸಿದ್ದ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದೆವು ಎಂದು ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ವಿಜಯಾ ರಾಮದಾಸ ರಾಯ್ಕರ ಸಂತಸ ವ್ಯಕ್ತಪಡಿಸಿದ್ದಾರೆ.