ಸಿದ್ದಾಪುರ: 2022-23ನೇ ಸಾಲಿನ ಕೃಷಿ ಇಲಾಖೆಯ ಕೃಷಿ ಪ್ರಶಸ್ತಿಗೆ ಅರ್ಹ ರೈತ ಮತ್ತು ರೈತ ಮಹಿಳೆಯರಿಂದ ಪ್ರತ್ಯೇಕವಾಗಿ ಅರ್ಜಿ ಆಹ್ವಾನಿಸಲಾಗಿದೆ.
ರೈತರು ಪಹಣಿ ಪತ್ರಿಕೆ, ಶುಲ್ಕ ಪಾವತಿಸಿದ್ದಕ್ಕೆ ಚಲನ್, ಪ.ಜಾ/ಪ.ಪಂ ರೈತರಾದಲ್ಲಿ ಜಾತಿ ಪ್ರಮಾಣ ಪತ್ರ, ರೈತರ ಛಾಯಾ ಚಿತ್ರ ದಾಖಲೆಗಳ ಸಲ್ಲಿಸಬೇಕು.ಅರ್ಜಿ ಸಲ್ಲಿಸಲು ಪ.ಜಾ/ಪ.ಪಂ ರೈತರಿಗೆ ರೂ.25 ಹಾಗೂ ಸಾಮಾನ್ಯ ವರ್ಗದ ರೈತರಿಗೆ ರೂ.100 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ಒಟ್ಟು ತಾಲೂಕಿನಲ್ಲಿ 15 ಕೃಷಿ ಪ್ರಶಸ್ತಿ ಅರ್ಜಿಗಳು ನೊಂದಾವಣೆ ಮಾಡಲು ಅವಕಾಶವಿದೆ. ಕನಿಷ್ಠ ವಿಸ್ತೀರ್ಣ 1 ಎಕರೆ ಇರಬೇಕು. ಆಸಕ್ತ ರೈತರು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಿಂದ ಅರ್ಜಿ ನಮೂನೆ ಪಡೆದು ಸೂಕ್ತ ದಾಖಲೆಗಳೊಂದಿಗೆ ಆಗಸ್ಟ್ ೩೧ರೊಳಗೆ ತಲುಪುವಂತೆ ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೊಂಡ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ (ಮೊ.ಸಂ: 82779 33060), ಕೋಡ್ಕಣಿ ಮೊ.ಸಂ: 82779 33059, ಉಂಬಳಮನೆ ಮೊ.ಸಂ: 82779 33062, ಸಿದ್ದಾಪುರ ತಾಲೂಕು ತಾಂತ್ರಿಕ ವ್ಯವಸ್ಥಾಪಕರ ಮೊ.ಸಂ: 91102 26458 ಮತ್ತು ಕೋಡ್ಕಣಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಮೊ.ಸಂ: 96200 65681ಗೆ ಸಂಪರ್ಕಿಸಲು ಕೋರಲಾಗಿದೆ.