Slide
Slide
Slide
previous arrow
next arrow

ಹಳೆ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಶಾಲೆಗಳ ಅಭಿವೃದ್ಧಿ ಸಾಧ್ಯ :ಶ್ವೇತಾ ಭಟ್

300x250 AD

ಹೊನ್ನಾವರ: ಇಂದು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದಾರೆ, ಉತ್ತಮ ಶಿಕ್ಷಣ ದೊರೆಯುತ್ತಿದೆ. ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಪಾಠೋಪಕರಣ ಮತ್ತು ಪೀಠೋಪಕರಣಗಳ ಸೌಲಭ್ಯ ನೀಡುವಲ್ಲಿ ಹಿಂದಿವೆ. ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಮರಳಿ ಸಹಾಯ ಮಾಡಿದರೆ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತವೆ ಎಂದು ವಂದೂರು ಮೂಲದ, ಸದ್ಯ ಅಮೆರಿಕದಲ್ಲಿ ವಾಸವಾಗಿರುವ ಶ್ವೇತಾ ಭಟ್ ಅಭಿಪ್ರಾಯಪಟ್ಟರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಂದೂರಿಗೆ ನಲಿ- ಕಲಿ ಶಿಕ್ಷಣಕ್ಕೆ ಅಗತ್ಯವಿರುವ ವಸ್ತುಗಳನ್ನು ದಾನವಾಗಿ ನೀಡಿ ಮಾತನಾಡಿ, ಪ್ರತಿ ಮನುಷ್ಯನ ಜೀವನದಲ್ಲಿ ಅವನ ಪ್ರಾಥಮಿಕ ಶಿಕ್ಷಣದ ಹಂತ ಪ್ರಮುಖವಾಗಿದ್ದು, ಇದು ಮನೆಯ ಪಂಚಾಂಗ ಇದ್ದಂತೆ. ನಾವು ಇಂದು ಏನೇ ಸಾಧನೆ ಮಾಡಿದ್ದರೂ ಅದಕ್ಕೆ ನಾವು ಕಲಿತ ಶಾಲೆ ಮತ್ತು ನಮಗೆ ಕಲಿಸಿದ ಶಿಕ್ಷಕರೇ ಕಾರಣ. ಹಾಗಾಗಿ ಶಾಲೆಯ ಋಣವನ್ನು ತೀರಿಸಲು ಅವಕಾಶಕ್ಕೆ ಚಿರಋಣಿಯಾಗಿದ್ದೇನೆ ಎಂದರು.

ಶಾಲೆಯ ಮತ್ತೋರ್ವ ಪೂರ್ವ ವಿದ್ಯಾರ್ಥಿ ಪ್ರಶಾಂತ್ ಹೆಗಡೆ ಮಾತನಾಡಿ, ಶಾಲೆ ಮತ್ತು ಶಾಲೆಯ ಪೂರ್ವ ವಿದ್ಯಾರ್ಥಿಗಳನ್ನು ಜೋಡಿಸುವ ಕೆಲಸವಾಗಬೇಕು. ಶಾಲೆಯ ಅಗತ್ಯತೆಗಳ ಪಟ್ಟಿಯನ್ನು ಶಾಲೆಯಿಂದ ಪಡೆದುಕೊಂಡಿತು. ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ದಾನಿಗಳನ್ನು ಸಂಪರ್ಕಿಸಿ ಶಾಲೆಗೆ ಪೂರೈಸಲಾಗುವುದು ಎಂದರು.

300x250 AD

ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯ ಪುಟಾಣಿ ಶ್ವೇತಾ ಭಟ್ ಅವರನ್ನು ಕೃತಜ್ಞತೆಯಿಂದ ಬೀಳ್ಕೊಟ್ಟರು. ವೇದಿಕೆಯಲ್ಲಿ ಶಿಕ್ಷಕರಾದ ಶಂಕರ ನಾಯ್ಕ, ದೇವರು ಭಟ್ಟ, ಜಿ.ಕೆ.ಹೆಗಡೆ, ಮಮತಾ ಹೆಗಡೆ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top