Slide
Slide
Slide
previous arrow
next arrow

ವ್ಯಕ್ತಿ ನಾಪತ್ತೆ : ದೂರು ದಾಖಲು

300x250 AD

ಜೋಯಿಡಾ : ತಾಲೂಕಿನ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯ ಇಂಡಸ್ಟ್ರಿಯಲ್ ಏರಿಯಾ ಭಾಗದಲ್ಲಿ ಶಿವರಾಜ್ ವಡ್ಡರ (31) ಎಂಬ ವ್ಯಕ್ತಿ ಕಾಣೆಯಾಗಿದ್ದು, ಈ ಬಗ್ಗೆ ಅವರ ತಾಯಿ ಪಾರ್ವತಿ ವಡ್ಡರ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಜನವರಿ 14 ರಂದು ಬೆಳಿಗ್ಗೆ ಕೆಲಸಕ್ಕೆ ತೆರಳುವುದಾಗಿ ಹೇಳಿ ಹೋದ ಶಿವರಾಜ್ ವಡ್ಡರ ಅವರು ಈವರೆಗೂ ಮನೆಗೆ ಬಾರದೆ ಇರುವುದರಿಂದ ರಾಮನಗರ ಪೋಲಿಸ್ ಠಾಣೆಯಲ್ಲಿ ನನ್ನ ಮಗನನ್ನು ಹುಡುಕಿ ಕೊಡಿ ಎಂದು ಪಾರ್ವತಿ ವಡ್ಡರ ಅವರು ದೂರಿನಲ್ಲಿ ವಿನಂತಿಸಿದ್ದಾರೆ. ಶಿವರಾಜ್ ಈತ ಕೂಲಿ ಕೆಲಸ ಮಾಡುತ್ತಿದ್ದು, ಮರಾಠಿ ,ಕೊಂಕಣಿ,ಹಿAದಿ ಭಾಷೆ ಮಾತನಾಡುತ್ತಾನೆ. ಕಪ್ಪು ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, ಗೋಧಿ ಬಣ್ಣದ ಮೈ ವರ್ಣ, ಸಾಧಾರಣ ಮೈ ಕಟ್ಟು, ದುಂಡನೆಯ ಮುಖ, ಎತ್ತರ 5 .8 ಮೀ ಇದ್ದಾನೆ. ಈತನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೂಡಲೇ ರಾಮನಗರ ಪೋಲಿಸ್ ಠಾಣೆಗೆ ಸಂಪರ್ಕಿಸಬೇಕಾಗಿ ರಾಮನಗರ ಪೊಲೀಸ್ ಠಾಣೆಯು ಪ್ರಕಟಣೆಯಲ್ಲಿ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top