Slide
Slide
Slide
previous arrow
next arrow

ವಸತಿ ಯೋಜನೆ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ಹಸ್ತಾಂತರ

300x250 AD

ಹೊನ್ನಾವರ: ತಾಲೂಕಿನ ವಿವಿಧ ವಸತಿ ಯೋಜನೆಯ ಫಲಾನುಭವಿಗಳಿಗೆ ಶಾಸಕ ದಿನಕರ ಶೆಟ್ಟಿ ಕಾರ್ಯಾದೇಶ ಪತ್ರವನ್ನು ಹಸ್ತಾಂತರಿಸಿದರು. ಕಡ್ಲೆ, ಕಡತೋಕಾ, ಚಂದಾವರ, ಹಳದಿಪುರ, ಸಾಲಕೋಡ, ನವಿಲುಗೋಣ, ಹಳದಿಪುರ ಹಾಗೂ ಮುಗ್ವಾ ಗ್ರಾಮಪಂಚಾಯತ್ ವ್ಯಾಪ್ತಿಯ ಒಟ್ಟು 149 ಫಲಾನುಭವಿಗಳು ಆದೇಶಪತ್ರವನ್ನು ಪಡೆದುಕೊಂಡರು. ಕಡ್ಲೆ ಗ್ರಾಮ ಪಂಚಾಯತದ ಉಪ್ಲೆಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾದೇಶ ಪತ್ರವನ್ನು ಹಸ್ತಾಂತರಿಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ದಿನಕರ ಶೆಟ್ಟಿ, ಜನರಿಗೆ ಮೂಲಭೂತ ಸೌಕರ್ಯಗಳಾಗಿರುವ ರಸ್ತೆ-ಸೇತುವೆ, ಶಾಲಾ-ಕಾಲೇಜು, ಮನೆ, ಆಸ್ಪತ್ರೆ, ಕುಡಿಯುವ ನೀರು ಈ ಎಲ್ಲವುಗಳಿಗಾಗಿ ನಮ್ಮ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ದಾಖಲೆಯ ಪ್ರಮಾಣದಲ್ಲಿ ಅನುದಾನವನ್ನು ಒದಗಿಸಿತ್ತು. ನನ್ನ ಅವಧಿಯಲ್ಲಿ ಚಂದಾವರ-ಅರೆಅಂಗಡಿ ರಸ್ತೆ, ಚಂದಾವರ-ಕುಮಟಾ ರಸ್ತೆ, ಚಂದಾವರ-ಸಂತೆಗುಳಿ ರಸ್ತೆ, ತೆಂಬ್ರಿ ಸೇತುವೆ, ಶೇಡಿಕುಳಿ ರಸ್ತೆ ಸೇರಿದಂತೆ ಇನ್ನು ಅನೇಕ ರಸ್ತೆಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಿಸಿದ್ದೇನೆ. ಅಗತ್ಯವಿರುವ ಶಾಲೆಗಳಿಗೆ ವಿವೇಕ ಶಾಲೆ ಯೋಜನೆಯಡಿಯಲ್ಲಿ ಹೊಸ ವರ್ಗಕೋಣೆಗಳನ್ನು ಒದಗಿಸಿದ್ದೇನೆ. ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸ್ವಂತಜಾಗ ಮಂಜೂರು ಮಾಡಿಸಿ, ಅತ್ಯುತ್ತಮ ಕಟ್ಟಡವನ್ನು ನಿರ್ಮಿಸಿಕೊಟ್ಟಿರುವ ಹೆಮ್ಮೆ ನನಗಿದೆ. ಶರಾವತಿ ಕುಡಿಯುವ ನೀರಿನ ಯೋಜನೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿದ್ದರಿಂದ ಹೊನ್ನಾವರ ಪಟ್ಟಣಿಗರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸಿದೆ. ಕರ್ಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪ್ರಾರಂಭವಾಗಲಿದೆ. ಹೀಗೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಿಮ್ಮೆಲ್ಲರ ಆಶೀರ್ವಾದದಿಂದ ಯಶಸ್ವಿಯಾಗಿ ನೆರವೇರಿಸಿದ್ದೇನೆ.

ವಾಸಮಾಡಲು ಒಂದು ಉತ್ತಮ ಮನೆಯನ್ನು ನಿರ್ಮಿಸಿಕೊಳ್ಳುವ ಕನಸು ಪ್ರತಿಯೊಬ್ಬ ಮನುಷ್ಯನಲ್ಲಿ ಇರುತ್ತದೆ. ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರಗಳು ವಸತಿಯೋಜನೆಯಡಿಯಲ್ಲಿ ಮನೆ ನಿರ್ಮಾಣಕ್ಕೆ ಅನುದಾನವನ್ನು ಒದಗಿಸುತ್ತದೆ. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಸತಿ ಸಚಿವ ವಿ. ಸೋಮಣ್ಣ ವಸತಿ ಯೋಜನೆಯಡಿಯಲ್ಲಿ ನನ್ನ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ನೀಡಿದ್ದರು. ಕಾರಣಾಂತರಗಳಿಂದ ಆದೇಶಪತ್ರ ನೀಡಲು ಕೊಂಚ ವಿಳಂಬವಾಗಿದೆ. ಗ್ರಾಮ ಪಂಚಾಯತದಿಂದ ಸೂಕ್ತ ಸಲಹೆ ಸೂಚನೆಗಳನ್ನು ಪಡೆದು, ಸರ್ಕಾರದ ಆದೇಶಾನುಸಾರ ಹಂತಹಂತವಾಗಿ ಮನೆನಿರ್ಮಿಸಿ ಸರ್ಕಾರ ನೀಡುವ ಅನುದಾನದ ಪ್ರಯೋಜನ ಪಡೆಯಿರಿ ಎಂದು ಫಲಾನುಭವಿಗಳಿಗೆ ಹೇಳಿದರು.

300x250 AD

ಗ್ರಾಮಪಂಚಾಯತ್ ಅಧ್ಯಕ್ಷರುಗಳಾದ ಸುಬ್ರಹ್ಮಣ್ಯ ಭಟ್, ಸಾವಿತ್ರಿ ಭಟ್, ಪ್ರೇಮಾ ನಾಯ್ಕ್, ಮಹಾದೇವಿ ನಾಯ್ಕ್, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಿ. ಎಸ್. ನಾಯ್ಕ್, ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಕೃಷ್ಣಾನಂದ ಭಟ್, ಭಾರತೀಯ ಜನತಾ ಪಾರ್ಟಿಯ ಪ್ರಮುಖರಾದ ರವಿ ಹೆಗಡೆ, ಕೃಷ್ಣ ಗೌಡ ಕಡ್ನೀರು, ನಾಗರಾಜ ಭಾಗವತ್, ಗೋವಿಂದ ಗೌಡ, ಊರ್ಮಿಳಾ ಶೇಟ್, ರಾಘು ಭಟ್, ಮಂಜು ಮಡಿವಾಳ, ಮಹಾಬಲೇಶ್ವರ ಮಡಿವಾಳ, ಅಖಿಲ್ ಖಾಜಿ, ನಿರ್ಮಲಾ ಡಯಾಸ್, ಗ್ರಾಮ ಪಂಚಾಯತ್ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರರು ಇದ್ದರು.

Share This
300x250 AD
300x250 AD
300x250 AD
Back to top