Slide
Slide
Slide
previous arrow
next arrow

ಫೆ.10ಕ್ಕೆ ‘ರಜತ ಸಂಭ್ರಮ ಕಾರ್ಯಕ್ರಮ’

300x250 AD

ಯಲ್ಲಾಪುರ: ತಾಲೂಕಾ ಕನ್ನಡ ವೈಶ್ಯ ಸಮಾಜ ಸಂಘದ ಆಶ್ರಯದಲ್ಲಿ ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಸ್ಥಾನ ಸಭಾಭವನದಲ್ಲಿ ಫೆ.10 ರಂದು 26ನೇಯ ಮಾಘ ಶುದ್ದ ಪ್ರತಿಪ್ರದೆ ಕಾರ್ಯಕ್ರಮ ಸಮಾಜದ ‘ರಜತ ಸಂಭ್ರಮ ಕಾರ್ಯಕ್ರಮ’ ನಡೆಯಲಿದೆ ಎಂದು ಸಂಘದ ತಾಲೂಕಾ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಹೇಳಿದರು.

ಅವರು ಗುರುವಾರ ಈ ಕುರಿತು ಮಾಹಿತಿ ನೀಡಿ,”ಸಮಾಜದ ಏಳಿಗೆ ಬಯಸಿದ ಶೃಂಗೇರಿ ಶ್ರೀಗಳ ಆಶೀರ್ವಾದಿಂದ ಕಳೆದ 25 ವರ್ಷಗಳಿಂದ ಸಮಾಜವನ್ನು ಸಂಘಟಿಸಿ ಮಾಘಶುದ್ದ ಪ್ರತಿಪದೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಮಾಜದ ಸಂಘಟನೆಯ ದೃಷ್ಟಿಯಿಂದ ಇದು ಮಹತ್ವದ ಕಾರ್ಯಕ್ರಮ ಆಗಿದ್ದು,ಬೆಳ್ಳಿ ಹಬ್ಬದ ಸಂಭ್ರಮದ ಪ್ರಯುಕ್ತ ಫೆ ೧೦ ರಂದು ಬೆಳಿಗ್ಗೆ ನವಚಂಡಿಕಾ ಹವನ ವಿವಿಧ ಧಾರ್ಮಿಕ ಕಾರ್ಯಕ್ರಮ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಸಭಾ ಕಾರ್ಯಕ್ರಮ ಇದ್ದು, ಗೋವಾದ ಎಸ್ ಇ ಆರ್ಟಿ ನಿವೃತ್ತ ನಿರ್ದೇಶಕ ನಾಗರಾಜ ಜಿ. ಶೆಟ್ಟಿ ಹೊನ್ನೆಕೇರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇಡಗುಂದಿ ಗ್ರಾ ಪಂ ಅಧ್ಯಕ್ಷ ಶ್ರೀಕಾಂತ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖರಾದ ಗುರುನಾಥ ಶೆಟ್ಟಿ,ಗಣೇಶ ಶೆಟ್ಟಿ,ಸುಮಂಗಲಾ ಶೆಟ್ಟಿ,ಛಾಯಾ ಶೆಟ್ಟಿ, ವಿದ್ಯಾ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು.

300x250 AD
Share This
300x250 AD
300x250 AD
300x250 AD
Back to top