ಕಾರವಾರ: ಪ್ರಸಕ್ತ ಸಾಲಿನ ಪ್ರಥಮ ಸೆಮಿಸ್ಟರ್/ಲ್ಯಾಟರಲ್ ಎಂಟ್ರಿ 3ನೇ ಸೆಮಿಸ್ಟರ್ ಡಿಪ್ಲೋಮಾಗೆ/ವೃತ್ತಿಪರ ಅಭ್ಯರ್ಥಿಗಳ ಲ್ಯಾಟರಲ್ ಎಂಟ್ರಿ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಥಮ ಸೆಮಿಸ್ಟರ್ ಸರ್ಕಾರಿ ಪಾಲಿಟೆಕ್ನಿಕ್, ಕಾರವಾರದಲ್ಲಿ ಪ್ರವೇಶ ಪಡೆಯಲು ಅವಧಿಯನ್ನು ಜು.15 ರ ವರೆಗೆ ವಿಸ್ತರಿಸಲಾಗಿದೆ.
ಈ ಸಂಸ್ಥೆಯಲ್ಲಿ ಪ್ರಥಮ ಸೆಮಿಸ್ಟರ್/ಲ್ಯಾಟರಲ್ ಎಂಟ್ರಿ 3ನೇ ಸೆಮಿಸ್ಟರ್‌ನಲ್ಲಿ ಭರ್ತಿ ಆಗದ ಉಳಿಕೆ ಸೀಟುಗಳು ಖಾಲಿ ಇರುತ್ತದೆ. ಕಾರಣ ಅರ್ಹವಿರುವ ವಿದ್ಯಾರ್ಥಿಗಳು ಜು.15 ರೊಳಗಾಗಿ ನಿಗದಿತ ಶುಲ್ಕವನ್ನು ಮತ್ತು ಸಂಬಂಧಿಸಿದ ಪ್ರಮಾಣ ಪತ್ರವನ್ನು ಸಲ್ಲಿಸಿ ಪ್ರವೇಶ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ಸೂಚನಾ ಫಲಕವನ್ನು ನೋಡುವುದು. ಅಥವಾ ಸಂಸ್ಥೆಯ ಪ್ರಿನ್ಸಿಪಾಲರ ದೂರವಾಣಿ ಸಂಖ್ಯೆ:Tel:+919448995682 ಹಾಗೂ ಕಚೇರಿಯ ದೂರವಾಣಿ ಸಂಖ್ಯೆ:Tel:+9108382226343 ನ್ನು ಸಂಪರ್ಕಿಸುಂತೆ ಕಾರವಾರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.