Slide
Slide
Slide
previous arrow
next arrow

ದಾಂಡೇಲಿ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷೆಯಾಗಿ ಡಾ.ಗೌರಿ ಆಯ್ಕೆ

300x250 AD

ದಾಂಡೇಲಿ : ದಾಂಡೇಲಿ ಸಿಟಿ ಲಯನ್ಸ್ ಕ್ಲಬ್ ಇದರ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ನಗರದ ವೈದ್ಯೆ ಹಾಗೂ ಸಮಾಜ ಸೇವಕಿ ಡಾ.ಗೌರಿ ಎಸ್.ಹಂಚಿನಾಳಮಠ ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ರುಬೀನಾ ಇಮ್ತಿಯಾಜ್ ಅತ್ತಾರ್ ಹಾಗೂ ಖಜಾಂಚಿಯಾಗಿ ನಗರದ ಶಿಕ್ಷಣ ತಜ್ಞೆ ಸುಮಂಗಲಾ ಚಿಕ್ಕಮಠ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕ್ಲಬ್ಬಿನ ಐಪಿಪಿಯಾಗಿ ಡಾ.ಸಂತೋಷ ಚೌವ್ಹಾಣ್, ನಿರ್ದೇಶಕರಾಗಿ ಯು.ಎಸ್.ಪಾಟೀಲ್, ಆಡಳಿತಾಧಿಕಾರಿಯಾಗಿ ಸೈಯದ್ ಇಸ್ಮಾಯಿಲ್ ತಂಗಳ, ಉಪಾಧ್ಯಕ್ಷರಾಗಿ ಲತಾ ಶೆಟ್ಟಿ ಮತ್ತು ಇಮ್ತಿಯಾಜ್ ಅತ್ತಾರ್, ಸಹಕಾರ್ಯದರ್ಶಿಯಾಗಿ ಮೋಹನ ಸನದಿ, ಸಹ ಖಜಂಚಿಯಾಗಿ ಮುರಳಿ ನಾಯ್ಕ ಹಾಗೂ ಇನ್ನಿತರ ಪದಾಧಿಕಾರಿಗಳಾಗಿ ಶಾರದಾ ದಂಡಗಲ್, ಮಹೀಮಾ ಗಣೇಶ ಖಾನಪುರ, ರವಿ ಎಸ್.ಪೈ, ಡಾ.ನಾಸೀರ ಅಹ್ಮದ್ ಜಂಗುಬಾಯಿ, ಚೇತನ್ ಎಸ್.ಕುಮಾರಮಠ, ಎನ್.ವಿ.ಪಾಟೀಲ್, ಅಶೋಕ್ ಶಿಲ್ಲಣ್ಣನವರ ಮತ್ತು ಪ್ರಾಣೇಶ ಮುಗುಳಿಹಾಳ ಹಾಗೂ ನಿರ್ದೇಶಕರಾಗಿ ಡಾ.ಎನ್.ಜಿ.ಬ್ಯಾಕೋಡ, ಉದಯ ಛಬ್ಬಿ, ವಿ.ಆರ್.ಹೆಗಡೆ, ಎಂ.ಸಿ.ಹಿರೇಮಠ, ಎಸ್.ಜಿ.ಕುಮಾರಮಠ, ಅನ್ನಪೂರ್ಣ ಬ್ಯಾಕೋಡ, ಅನಿಲ್ ದಂಡಗಲ್, ವೀರೇಶ ಯರಗೇರಿ ಮತ್ತು ಡಾ.ಶೇಖರ ಎಸ್.ಎಚ್ ಅವರನ್ನು ಆಯ್ಕೆ ಮಾಡಲಾಗಿದೆ.

2025 – 26 ನೇ ಸಾಲಿನಲ್ಲಿ ವಿಶೇಷವಾಗಿ ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗಾಗಿ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು, ವಿಶೇಷವಾಗಿ ಬಡವರ ಮನೆ ಬಾಗಿಲಿಗೆ ಆರೋಗ್ಯ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಮೊದಲ ಆದ್ಯತೆಯಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ಲಯನ್ಸ್ ಕ್ಲಬ್ಬಿನ ನೂತನ ಅಧ್ಯಕ್ಷೆ ಡಾ.ಗೌರಿ ಎಸ್.ಹಂಚಿನಾಳಮಠ, ಕಾರ್ಯದರ್ಶಿ ರುಬೀನಾ ಇಮ್ತಿಯಾಜ್ ಅತ್ತಾರ್ ಮತ್ತು ಖಜಾಂಚಿ ಸುಮಂಗಲಾ ಚಿಕ್ಕಮಠ ಅವರು ಸೋಮವಾರ ನಗರದಲ್ಲಿ ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.

300x250 AD

ಜೂ. 26 ರಂದು ಸಂಜೆ .6.30 ಗಂಟೆಗೆ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಡಿಲಕ್ಸ್ ಸಭಾಭವನದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಲಯನ್ಸ್ ಜಿಲ್ಲಾ ಪ್ರಥಮ ಉಪ ಪ್ರಾಂತಪಾಲ ಪಿ.ಎಮ್.ಜೆ.ಎಫ್ ಲಯನ್ ರಾಜಶೇಖರ ಹಿರೇಮಠ ನೂತನ ಪದಾಧಿಕಾರಿಗಳಿಗೆ ಅಧಿಕಾರ ಬೋಧನೆ ಮಾಡಲಿದ್ದಾರೆಂದು ಹಾಗೂ ಈ ಕಾರ್ಯಕ್ರಮದಲ್ಲಿ ಎಂ.ಜೆ.ಎಫ್ ಮೋನಿಕಾ ಸಾವಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಲಯನ್ಸ್ ಕ್ಬಬ್ಬಿನ ನೂತನ ಅಧ್ಯಕ್ಷೆ ಡಾ.ಗೌರಿ ಎಸ್. ಹಂಚಿನಾಳಮಠ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top