Slide
Slide
Slide
previous arrow
next arrow

ಕಾರವಾರದಲ್ಲಿ APT 2.0 ತಂತ್ರಾಂಶಕ್ಕೆ ಚಾಲನೆ

300x250 AD

ಕಾರವಾರ: ಅಂಚೆ ಇಲಾಖೆಯ ನವೀನ ತಂತ್ರಾಂಶ APT 2.0 ಅನ್ನು ಕಾರವಾರ ತಾಲೂಕಿನ ವಿವಿಧ ಶಾಖೆಗಳಲ್ಲಿ ಭಾನುವಾರ ಅಳವಡಿಸಲಾಯಿತು.
ನಗರದ ಕೈಗಾ, ಕದ್ರಾ, ಆಸ್ನೋಟಿ, ಅಂಗಡಿ, ಹಳಗ ಮಾಜಾಳಿ, ಸದಾಶಿವಗಡ, ಹಬ್ಬುವಾಡ, ನಂದನಗದ್ದ, ಕೋಡಿಬಾಗ, ಬೈತಕೋಲ್, ಕಾರವಾರ ಪ್ರಧಾನ ಅಂಚೆ ಕಚೇರಿ, ಚೆಂಡಿಯ, ನೌಕನೆಲೆ(ನೆವೆಲ್‌ಬೇಸ್), ಕಾರವಾರ ಮಾರ್ಕೆಟ್ ಹಾಗೂ ಬಿಣಗಾ ಕಚೇರಿಗಳು ಮತ್ತು ಅಂಕೋಲಾ ತಾಲೂಕಿನ ಅಂಕೋಲಾ ಶೆಟಗೇರಿ ವಂದಿಗೆ ಬೇಲೆಕೇರಿ ಮತ್ತು ಅವರ್ಸಾ ಕಚೇರಿಯಲ್ಲಿ ಈ ಸುಧಾರಿತ ತಂತ್ರಾಂಶವನ್ನು ಅಳವಡಿಸಿಕೊಂಡ ಶಾಖೆಗಳಾಗಿವೆ.
ಈ ವಿಶೇಷ ಕಾರ್ಯಕ್ರಮಕ್ಕೆ ಕಾರವಾರ ವಿಭಾಗದ ಅಂಚೆ ಅಧೀಕ್ಷಕ ಧನಂಜಯ ಆಚಾರ್ಯ ದೀಪ ಬೆಳಗಿಸಿ ಹಾಗೂ ಅಂಚೆ ಗ್ರಾಹಕರಿಗೆ ರಶೀದಿ ನೀಡುವ ಮೂಲಕ ಅಧಿಕೃತ ಚಾಲನೆ ನೀಡಿದರು.
APT 2.0 ನ್ನು ಅಳವಡಿಸುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಸುಧಾರಿತ, ವೇಗದ ಹಾಗೂ ನಿಖರ ಸೇವೆಗಳನ್ನು ನೀಡಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದರು.
ಕಾರ್ಯಕ್ರಮದಲ್ಲಿ ಉಪ ಅಂಚೆ ಅಧೀಕ್ಷಕ ಅಕ್ಷಯ ಕಾಮತ್, ಪೋಸ್ಟ್ ಮಾಸ್ಟರ್ ಶ್ರೀಧರ್ ಕುವಳೆಕಾರ್, ಇತರೆ ಅಂಚೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

300x250 AD
Share This
300x250 AD
300x250 AD
300x250 AD
Back to top