Slide
Slide
Slide
previous arrow
next arrow

ಅಂಬಿಕಾನಗರದ ನೂತ‌ನ ಅಂಗನವಾಡಿ ಕೇಂದ್ರದ ಉದ್ಘಾಟನೆ

300x250 AD

ದಾಂಡೇಲಿ : ತಾಲೂಕಿನ ಅಂಬಿಕಾನಗರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅಂಬಿಕಾನಗರ ಅಡಿಟ್ ನಂ.2 ರಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರದ ಉದ್ಘಾಟನೆಯು ಜರುಗಿತು.

ನೂತನ ಅಂಗನವಾಡಿ ಕೇಂದ್ರವನ್ನು ಅಂಬಿಕಾನಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೇಘಾ ಮಾರುತಿ ಗೌಡ ಅವರು ಉದ್ಘಾಟಿಸಿ, ಪ್ರತಿಯೊಬ್ಬರ ಶೈಕ್ಷಣಿಕ ಜೀವನದಲ್ಲಿ ಅಂಗನವಾಡಿ ಕೇಂದ್ರ ಮೊದಲ ಮೆಟ್ಟಿಲು. ಈ ಅಂಗನವಾಡಿ ಕೇಂದ್ರ ಸ್ಥಳೀಯ ಪುಟಾಣಿಗಳ ಶೈಕ್ಷಣಿಕ ಬದುಕಿಗೆ ಹೊಸ ಮುನ್ನುಡಿಯನ್ನು ಬರೆಯಲಿ ಎಂದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ಧಾರೂಢ ಗಜಗಲ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಮೇಶ್ ಕಾಳು ನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಜಯಶ್ರೀ ಮೊರಬದ, ಹಿರಿಯರಾದ ವಿಠ್ಠು ಸತ್ತು ಬಿಚ್ಚುಕಲೆ, ದೇವು ನಾವು ಎಡಗೆ ಮೊದಲಾದವರು ಭಾಗವಹಿಸಿ ಶುಭವನ್ನು ಕೋರಿದರು.

300x250 AD

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಬಾಗುಬಾಯಿ ನಾವು ಯಮಕರ ಮತ್ತು ಭಾಗೀರಥಿ ಬಾಪು ಪಟಕಾರೆ ಹಾಗೂ ಸ್ಥಳೀಯರು ಮತ್ತು ಅಂಗನವಾಡಿ ಕೇಂದ್ರದ ಮಕ್ಕಳ ಪಾಲಕರು ಮತ್ತು ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top