ಸಿದ್ದಾಪುರ: ಪಟ್ಟಣದ ಸಿದ್ಧಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ದೀಕ್ಷಾ ಎಸ್. ಗೌಡ ಎಸ್ಎಸ್ಎಲ್ಸಿಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಳು. ಮರುಮೌಲ್ಯಮಾಪನ ಮಾಡಿಸಿದ್ದರಿಂದ ಸಮಾಜ ವಿಜ್ಞಾನ ವಿಷಯದಲ್ಲಿ 100ಕ್ಕೆ 100ಅಂಕ ಪಡೆದು 625ಕ್ಕೆ 625 ಅಂಕಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಳಡಿದ್ದಾಳೆ ಎಂದು ಬಿಇಒ ಎಂ.ಎಚ್.ನಾಯ್ಕ ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕ ವೃಂದದವರು, ಶಿಕ್ಷಣ ಪ್ರಸಾರಕ ಸಮಿತಿಯ ಚೇರಮನ್ನ ವಿನಾಯಕ ರಾವ್ ಜಿ. ಹೆಗಡೆ ಹಾಗೂ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಹರ್ಷವ್ಯಕ್ತಪಡಿಸಿದ್ದಾರೆ.
ಎಸ್ಎಸ್ಎಲ್ಸಿ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಿದ್ದಾಪುರದ ದೀಕ್ಷಾ ಗೌಡ
