Slide
Slide
Slide
previous arrow
next arrow

ಗಣೇಶನಗರ ಸರಕಾರಿ ಪ್ರೌಢಶಾಲೆ ಶೇ.100ರ ಸಾಧನೆ

300x250 AD

 ಶಿರಸಿ; ಹಿಂದುಳಿದ ಮತ್ತು ಬಡಕೂಲಿಕಾರ್ಮಿಕರ ಮಕ್ಕಳಿಂದ ಕೂಡಿದ ಗಣೇಶನಗರದ ಸರಕಾರಿ ಪ್ರೌಢಶಾಲೆಯು ಈ ಸಾರಿಯೂ  ಎಸ್.‌ಎಸ್.‌ಎಲ್.‌ಸಿ. ಪರೀಕ್ಷೆಯಲ್ಲಿ ಶೇ. ನೂರರ ಸಾಧನೆಯನ್ನು ಸಾಧಿಸುವುದರ ಮೂಲಕ ಸತತ ಮೂರು ವರ್ಷಗಳಿಂದ ಹ್ಯಾಟ್ರಿಕ್‌ ಸಾಧನೆಯ ಮೈಲಿಗಲ್ಲು ಸಾಧಿಸಿದೆ.ಅಲ್ಲದೆ ಶಾಲಾ ಗುಣಾತ್ಮಕ ಫಲಿತಾಂಶ ೮೮.೧೭ ಆಗಿದ್ದು, “ಎ” ಶ್ರೇಣಿ ಪಡೆದಿದೆ. ಪ್ರಸಕ್ತ ಸಾಲಿನ ೩೦ ವಿದ್ಯಾರ್ಥಿಗಳಲ್ಲಿ ೦೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌,೧೯ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ೦೩ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿರುತ್ತಾರೆ. ದರ್ಶನ್.ಬಾಗೇವಾಡಿ ಶೇ.೯೫.೨ ಪ್ರಥಮ, ಸತ್ಯಮ್ಮ ಕುರುಬರ ಶೇ.೯೨.೨ ದ್ವಿತೀಯ, ರಕ್ಷಿತಾ ಹೆಗಡೆ ಶೇ.೯೨ ತೃತೀಯ ಸ್ಥಾನ ಪಡೆದಿರುತ್ತಾರೆ. ಪ್ರತಿವರ್ಷ ಉತ್ತಮ ಶೈಕ್ಷಣಿಕ ಫಲಿತಾಂಶವನ್ನು   ಮತ್ತು ವಿಜ್ಞಾನ-ಕ್ರೀಡೆಯಂತಹ ಪಠ್ಯೇತರ ಚೆಟುವಟಿಕೆಯಲ್ಲಿ ಗಮನಾರ್ಹ  ಸಾಧನೆಯನ್ನು ಮಾಡುತ್ತಿರುವ ಈ ಶಾಲೆಯ ಮಕ್ಕಳನ್ನು, ಅದಕ್ಕೆ ಪೂರಕವಾಗಿರುವ ಮುಖ್ಯಾಧ್ಯಾಪಕ ಆರ್.ಜಿ.ಪಟಗಾರ ಮತ್ತು ಶಿಕ್ಷಕವೃಂದದವರನ್ನು ಉಪನಿರ್ದೇಶಕರಾದ ಪಿ.ಬಸವರಾಜ, ಕ್ಷೇತ್ರಶಿಕ್ಷಣಾಧಿಕಾರಿಗಳು ನಾಗರಾಜ.ನಾಯ್ಕ ಮತ್ತು ಎಸ.ಡಿ.ಎಂ.ಸಿ. ಉಪಾಧ್ಯಕ್ಷ ರಾಜೇಶ.ಮುಣಿಯಾಣಿ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top