ಶಿರಸಿ: ಬಂಗಾರದ ಬೆಲೆ 10 ಗ್ರಾಮ್‌ಗೆ ಲಕ್ಷ ರೂ. ಗಡಿಯಲ್ಲಿದ್ದರೂ ಶಿರಸಿಯಲ್ಲಿ ಆಭರಣ ಪ್ರಿಯರು ಅಕ್ಷಯ ತೃತೀಯದಂದು ತಮಗಿಷ್ಟವಾದ ಚಿನ್ನ-ಬೆಳ್ಳಿ ಆಭರಣಗಳನ್ನು ಮುಗಿಬಿದ್ದು ಖರೀದಿಸುತ್ತಿರುವುದು ಕಂಡುಬಂದಿತು.
ಶಿರಸಿ ಸಿಂಪಿಗಲ್ಲಿಯಲ್ಲಿರುವ ಇ-ಪ್ರದೀಪ ಜ್ಯುವೆಲರ್ಸ್ ಉತ್ತರಕನ್ನಡ ಜಿಲ್ಲೆಯಲ್ಲಿಯೇ ಹೆಚ್ಚು ದೊಡ್ಡದಾದ ಮತ್ತು ಗ್ರಾಹಕರ ವಿಶ್ವಾಸಾರ್ಹ ಆಭರಣ ಮಳಿಗೆಯಾಗಿದ್ದು, ಅಕ್ಷಯ ತೃತೀಯವಾದ ಬುಧವಾರ ಈ ಮಳಿಗೆಯಲ್ಲಿ ವಿಶೇಷ ಆಫರ್ ಘೋಷಿಸಿದ್ದ ಹಿನ್ನೆಲೆಯಲ್ಲಿ ನೂರಾರು ಗ್ರಾಹಕರು ಉತ್ಸಾಹದಿಂದ ಆಗಮಿಸಿ ತಮಗಿಷ್ಟವಾದ ಚಿನ್ನಾಭರಣಗಳನ್ನು ಖರೀದಿಸಿ ಖುಷಿಪಟ್ಟರು.
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಚಿನ್ನಾಭರಣ ಮಳಿಗೆಗಳನ್ನು ಹೊಂದಿರುವ ಶಿರಸಿಯಲ್ಲಿ ಪ್ರತಿ ನಿತ್ಯ ಚಿನ್ನಾಭರಣ ವ್ಯಾಪಾರ ಭರ್ಜರಿಯಾಗಿಯೇ ನಡೆಯುತ್ತದೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಸಕಲ ಸೌಭಾಗ್ಯಗಳು ಲಭಿಸಲಿದೆ ಎಂಬ ನಂಬಿಕೆ ಇಂದಿಗೂ ಜನರಲ್ಲಿ ಇದೆ.
ಜನತೆಯ ಸ್ಪಂದನೆ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿದೆ. ಗ್ರಾಮೀಣದ ನಮ್ಮ ಗ್ರಾಹಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಭರಣ ಖರೀದಿಯಲ್ಲಿ ಆಸಕ್ತಿ ತೋರಿದರು. ಗುಣಮಟ್ಟದ (916)ಚಿನ್ನ ಮಾರುಕಟ್ಟೆಯ ದರಕ್ಕಿಂತ ಕಡಿಮೆ (ರೂ.87900/-) ಮತ್ತು ಖರೀದಿಸಿದ ಚಿನ್ನದಷ್ಟೇ ತೂಕದ ಉಚಿತ ಬೆಳ್ಳಿ ನಾಣ್ಯ ಕೊಡುಗೆಯ ನಮ್ಮ ಆಫರ್ ಜನಪ್ರಿಯವಾಗಿದೆ. ಗ್ರಾಹಕರ ಸ್ಪಂದನೆ ಮತ್ತು ಸಹಕಾರ ಖುಷಿ ನೀಡಿದೆ.
ಪ್ರದೀಪ ಎಲ್ಲನಕರ್, ಮಾಲಕರು