ಹೊನ್ನಾವರ : ರೋಟರಿ ಕ್ಲಬ್ ಆಯೋಜಿಸಿದ ತಾಲೂಕಿನ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳ ಎಂಟು ದಿನಗಳ ಅವಧಿಯು ವ್ಯಕ್ತಿತ್ವ ವಿಕಸನ ಶಿಬಿರ ಸಂಪನ್ನಗೊಂಡಿತು. ಬಟ್ಟೂ 58 ವಿದ್ಯಾರ್ಥಿಗಳು ನೊಂದಾಯಿಸಿದ್ದರು. ಶಿಬಿರದಲ್ಲಿ ವಿವಿಧ ವಿಭಾಗಗಳಲ್ಲಿ ಪರಿಣಿತಿ ಪಡೆದ ಸಂಪನ್ಮೂಲ ವ್ಯಕ್ತಿಗಳ ಮೂಲಕವಾಗಿ ಮಕ್ಕಳಿಗೆ ತರಬೇತಿ ನೀಡಲಾಯಿತು. ಇದಲ್ಲದೆ ಪರಿಸರ ಅಧ್ಯಯನ ಕ್ರೀಡೆ, ವರ್ಲಿ ಪೇಟಿಂಗ್, ಕಸದಿಂದ ರಸ, ಯೋಗ, ನೃತ್ಯ, ನಾಟಕ, ಸಂಗೀತ ಮತ್ತು ಆರೋಗ್ಯ ಮಾಹಿತಿ ಮುಂತಾದ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ನುರಿತ ಅಧ್ಯಾಪಕರುಗಳಿಂದ ತರಬೇತಿ ನೀಡಲಾಯಿತು. ಮಕ್ಕಳಿಗೆ ಊಟ, ಪಾನೀಯ, ಉಪಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.
ಶಿಬಿರದ ಮುಕ್ತಾಯ ಸಮಾರಂಭಕ್ಕೆ ಸಹಾಯಕ ಪ್ರಾಂತಪಾಲ ರೊ. ರಾಘವೇಂದ್ರ ಪ್ರಭು ಮುಖ್ಯ ಅತಿಥಿಗಳಾಗಿ ಆಗಮಿಸಿ ಬೇಸಿಗೆ ಶಿಬಿರವನ್ನು ಒಳ್ಳೆಯ ರೀತಿಯಿಂದ ಆಯೋಜಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇನ್ನೋರ್ವ ಅತಿಥಿ ಗಣೇಶ ಜೋಶಿ ಮುಖ್ಯಾಧ್ಯಾಪಕರು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕುಮಟಾ ಆಗಮಿಸಿ ಮಕ್ಕಳಿಗೆ ಬೇಸಿಗೆ ಶಿಬಿರದ ಮಹತ್ವ ತಿಳಿಸಿಕೊಟ್ಟರು. ಕಾರ್ಯಕ್ರಮ ಸಂಯೋಜಕ ರೊ.ಎಸ್.ಎನ್.ಹೆಗಡೆ ಸ್ವಾಗತಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಸೂರ್ಯಕಾಂತ ಸಾರಂಗ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ಎಂ.ಹೆಗಡೆ ಕಾರ್ಯದರ್ಶಿ ವಂದಿಸಿದರು. ಸಭೆಯಲ್ಲಿ ಶಿಬಿರದ ವ್ಯವಸ್ಥಾಪಕ ರೊ.ಜಿ.ಟಿ.ಹೆಬ್ಬಾರ ಹಿರಿಯ ರೋಟರಿಯನ್ನರುಗಳು ಉಪಸ್ಥಿತರಿದ್ದರು. ರೊ. ದಿನೇಶ ಕಾಮತ ಕಾರ್ಯಕ್ರಮ ನಿರೂಪಿಸಿದರು.