ದಾಂಡೇಲಿ : ನಗರದ ಸಮೀಪದಲ್ಲಿರುವ ಕೋಗಿಲಬನದಲ್ಲಿ ರಾತ್ರಿ ವೇಳೆ ಮನೆಗಳ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆಯುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಕಳೆದ 20 ದಿನಗಳಿಂದ ಪ್ರತಿದಿನ ಈ ಘಟನೆ ನಡೆಯುತ್ತಿದೆ. ರಾತ್ರಿ ವೇಳೆಯಲ್ಲಿ ಮನೆಗಳ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆಯುತ್ತಿದ್ದು, ಕೆಲವು ಮನೆಗಳ ಮೇಲ್ಚಾವಣಿ ಶೀಟುಗಳು ಒಡೆದು ಹೋಗಿದೆ. ಕೆಲವು ಮನೆಗಳಲ್ಲಿ ಸಣ್ಣ ಸಣ್ಣ ಮಕ್ಕಳಿದ್ದು, ಸ್ಥಳೀಯರು ಜೀವಭಯದಿಂದಲೇ ದಿನ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಈ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಲಾಗಿದ್ದು, ಪೊಲೀಸರು ಭೇಟಿ ನೀಡಿದ್ದಾರೆ. ಆದರೆ ಕಲ್ಲು ತೂರಾಟ ಮಾತ್ರ ಇನ್ನೂ ನಿಂತಿಲ್ಲ. ಆದ್ದರಿಂದ ಕಲ್ಲು ತೂರಾಟ ಮಾಡುವ ಕಿಡಿಗೇಡಿಗಳ ಮೇಲೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮವನ್ನು ಕೈಗೊಂಡು ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಮಂಗಳವಾರ ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ.
ಸ್ಥಳೀಯರ ಪ್ರತಿಕ್ರಿಯೆ :
ನಾವು ಕಳೆದ ಕೆಲವು ದಿನಗಳಿಂದ ಜೀವಭಯದಿಂದಲೇ ದಿನ ಕಳೆಯಬೇಕಾಗಿದೆ. ರಾತ್ರಿಯಾಗುತ್ತಿದ್ದಂತೆಯೆ ಮನೆಗಳ ಮೇಲೆ ಕಲ್ಲುಗಳನ್ನು ಒಗೆಯಲಾಗುತ್ತದೆ. ಏನಾದರೂ ಹೆಚ್ಚು ಕಡಿಮೆಯಾದರೇ ಯಾರು ಜವಾಬ್ದಾರಿ. ಕಲ್ಲು ಬಿಸಾಕುವ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಸ್ಥಳೀಯರಾದ ಹಜರತ್ ಸಾಬ್ ಸಾನಿವಾಲೆ, ಹಸೀನಾ ಇಸೂಬ್ ಪಠಾಣ್, ಸಂಶದ್, ಶಾಬೀರಾ ಇಸಾಕ ಸಾಬ್ ಹಟ್ಟೆವೊಲಿ, ಪದ್ಮಾ, ಅಲ್ಲಾವುದ್ದೀನ್, ಮಹಮೂದಾ, ಶೆರೀಪಾ, ಸಲ್ಮಾ ಮೊದಲಾದವರು ಮನವಿ ಮಾಡಿದ್ದಾರೆ.