ದಾಂಡೇಲಿ : ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಧೋರಣೆ ಮತ್ತು ಅಗತ್ಯ ಪದಾರ್ಥಗಳ ಬೆಲೆ ಏರಿಕೆ ಖಂಡಿಸಿ ಮಂಗಳವಾರ ನಗರದ ಸೋಮಾನಿ ವೃತ್ತದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಬಿಜೆಪಿ ಕಾರ್ಯಕರ್ತರು ರಾಜ್ಯಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾದ ಬುದವಂತ ಗೌಡ ಪಾಟೀಲ್ ಬಿಜೆಪಿ ಮುಖಂಡರುಗಳಾದ ಸುಧಾಕರ ರೆಡ್ಡಿ, ಬಸವರಾಜ ಕಲಶೆಟ್ಟಿ, ಮಿಥುನ್ ನಾಯಕ, ಗಿರೀಶ ಟೋಸೂರ, ರವಿ ಗಾಂವಕರ, ಚನ್ನಬಸಪ್ಪ ಮುರುಗೋಡ, ರಮೇಶ್ ಹೊಸಮನಿ, ಸಂತೋಷ ಬುಲುಬುಲೆ, ಸಾವಿತ್ರಿ ಬಡಿಗೇರ್ ಪದ್ಮಜಾ ಪ್ರವೀಣ್ ಜನ್ನು, ರಮಾ ರವೀಂದ್ರ, ರವಿ ವಾಟ್ಲೇಕರ ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.