ಸಿದ್ದಾಪುರ. ತಾಲೂಕಿನ ನಾಣಿಕಟ್ಟಾದ ಸರಕಾರಿ ಪದವಿ ಪೂರ್ವ ಕಾಲೇಜು, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ರ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ ಒಟ್ಟು 105 ವಿದ್ಯಾರ್ಥಿಗಳಲ್ಲಿ 96 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 91.43 ಪ್ರತಿಶತ ಫಲಿತಾಂಶವನ್ನು ದಾಖಲಿಸಿದೆ. ಇವರಲ್ಲಿ ಉನ್ನತ ಶ್ರೇಣಿಯಲ್ಲಿ 10 ಪ್ರಥಮ ದರ್ಜೆಯಲ್ಲಿ 69 ದ್ವಿತೀಯ ದರ್ಜೆಯಲ್ಲಿ 16 ಹಾಗೂ ತೃತೀಯ ದರ್ಜೆಯಲ್ಲಿ ಒಬ್ಬರು ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ ಒಟ್ಟು 38 ವಿದ್ಯಾರ್ಥಿಗಳಲ್ಲಿ 34 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಚಂದನ್ ಎಸ್.ಕಟ್ಯಾನ 575 ಅಂಕಗಳು (95.83%), ಎನ್. ಎಸ್. ಸಿಂಚನ 533 (88.83%) ಹಾಗೂ ನಂದಿತಾ ಆನಂದ ನಾಯ್ಕ 512 (85.33%) ಅಂಕಗಳೊಂದಿಗೆ ಕಾಲೇಜಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 40 ವಿದ್ಯಾರ್ಥಿಗಳಲ್ಲಿ 37 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅವರಲ್ಲಿ ಕಾವ್ಯ ತಿಮ್ಮಪ್ಪ ಗೌಡ 571 (86.16%) ಭಾಗ್ಯಶ್ರೀ ಒಕ್ಕಲಿಗ 542 (90.33%) ಗೀತಾ ಒಕ್ಕಲಿಗ 514 (85.66%) ಅಂಕಗಳೊಂದಿಗೆ ಮೊದಲ ಮೂರು ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ವಿಜ್ಞಾನ ವಿಭಾಗದ 27 ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಇವರಲ್ಲಿ ಸ್ವಾತಿ ಸುರೇಶ ಶೇಟ್ 578 (96.33) ಕಿಶನ್ ನಾಯ್ಕ 550 (91.66%) ಮಾನ್ಯ ಮಹೇಶ್ ನಾಯ್ಕ 527 (87.33) ಅಂಕಗಳೊಂದಿಗೆ ಮೊದಲ ಮೂರು ಸ್ಥಾನಗಳನ್ನು ಗಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಈ ಕಾಲೇಜಿನ ಸಾಧನೆಗೆ ಉತ್ತಮ ಶ್ಲಾಘನೆ ದೊರೆತಿದೆ.
ಪಿಯುಸಿ ಫಲಿತಾಂಶ: ನಾಣಿಕಟ್ಟಾ ಪಿಯು ಕಾಲೇಜಿನ ಸಾಧನೆ
