ಶಿರಸಿ: ಉತ್ತರಕನ್ನಡ ಜಿಲ್ಲೆಯ ಮೊಟ್ಟಮೊದಲ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಿತ ಶಿರಸಿಯ ಡಾ.ಭಾಸ್ಕರ ಸ್ವಾದಿ ಮೆಮೋರಿಯಲ್ ಲಯನ್ಸ್ ಪಿ.ಯು. ಕಾಲೇಜಿನ ಚೊಚ್ಚಲ ಬ್ಯಾಚ್ ದ್ವಿತೀಯ ಪಿ.ಯು. ಪರೀಕ್ಷಾ ಫಲಿತಾಂಶದಲ್ಲಿ ಶೇ.100ರ ಉತ್ತೀರ್ಣತೆಯ ಸಾಧನೆ ಗೈದಿದೆ. ಪರೀಕ್ಷೆಗೆ ಕುಳಿತ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ಅದಕ್ಕೂ ಹೆಚ್ಚಿನ ಉನ್ನತ ಅಂಕ ಪಡೆದು ತೇರ್ಗಡೆಯಾಗುವುದರೊಂದಿಗೆ ವಿಶಿಷ್ಟ ದಾಖಲೆ ಮೆರೆದಿದ್ದಾರೆ.
ದ್ವಿತೀಯ ಪಿ.ಯು ವಿಜ್ಞಾನ ವಿಭಾಗದಲ್ಲಿ ಚಿನ್ಮಯ ಶಾಂತಾರಾಮ ಭಟ್ ಶೇ.94.67 ಅಂಕ ಹಾಗೂ ಗಣಿತ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದರೆ. ಅಯನಾ ವಾಯ್. ಶೇ. 92.67 ಅಂಕದೊಂದಿಗೆ ದ್ವಿತೀಯ ಸ್ಥಾನ ಹಾಗೂ ಚಿನ್ಮಯೀ ಜಿ. ಶೆ.92.17 ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ ಒಂಬತ್ತೂ ವಿದ್ಯಾರ್ಥಿಗಳು ಶೇ.68ಕ್ಕಿಂತ ಹೆಚ್ಚಿನ ಅಂಕ ಪಡೆದು ಸಾಧನೆ ಮೆರೆದಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳಿಗೆ, ಇವರ ಸಾಧನೆಗೆ ಬೆನ್ನೆಲುಬಾಗಿ ನಿಂತ ಪಾಲಕರಿಗೆ, ಬೋಧಕ ವೃಂದಕ್ಕೆ ಶಿರಸಿ ಲಯನ್ಸ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಬೇಸ್ ಎಜುಕೇಷನ್ ಬೆಂಗಳೂರಿನ ತಂಡ, ಶಿರಸಿಯ ಅಕೌಂಟಿನ್ಸಿ ವರ್ಲ್ಡ್, ಲಯನ್ಸ್ ಸಮೂಹ ಶಾಲೆ ಹಾಗೂ ಕಾಲೇಜಿನ ಪ್ರಾಚಾರ್ಯರು , ಬೋಧಕ -ಬೋಧಕೇತರ ವೃಂದ, ಶಿರಸಿ ಲಯನ್ಸ್ ಕ್ಲಬ್ ಬಳಗ ಆಶೀರ್ವಾದಪೂರ್ವಕವಾಗಿ ಅಭಿವಂದಿಸಿ, ಶುಭ ಹಾರೈಸಿದ್ದಾರೆ.
2025- 26ನೇ ಸಾಲಿನ ಪ್ರಥಮ ಪಿ.ಯು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಪ್ರವೇಶ ಪ್ರಕ್ರಿಯೆ ನಡೆದಿದ್ದು, ಆಸಕ್ತ ಪಾಲಕರು ತಮ್ಮ ಮಕ್ಕಳನ್ನು ಸೇರಿಸಬಹುದಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಿತ ಕಾಲೇಜು ಶಿರಸಿ ಲಯನ್ಸ್ ಅಕಾಡೆಮಿ, ಬೇಸ್ ಎಜುಕೇಷನ್ ಬೆಂಗಳೂರು ಹಾಗೂ ಶಿರಸಿಯ ಅಕೌಂಟಿನ್ಸಿ ವರ್ಲ್ಡ್ ಇವರ ಸಹಯೋಗದಲ್ಲಿ ನಡೆಯುತ್ತಿದೆ. ಆಸಕ್ತರು ಕೂಡಲೆ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಿದೆ.