ಶಿರಸಿ: ಇಲ್ಲಿನ ಚಂದನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶವು ಶೇ.97% ರಷ್ಟಾಗಿದ್ದು ಪರೀಕ್ಷೆಗೆ ಕುಳಿತ 169 ವಿದ್ಯಾರ್ಥಿಗಳಲ್ಲಿ 89 ವಿದ್ಯಾರ್ಥಿಗಳು 85 %ಕ್ಕೂ ಅಧಿಕ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 96% ರಷ್ಟು ಫಲಿತಾಂಶ ದಾಖಲಾಗಿದ್ದು ಪರೀಕ್ಷೆ ಬರೆದ 152 ವಿದ್ಯಾರ್ಥಿಗಳಲ್ಲಿ 87 ವಿದ್ಯಾರ್ಥಿಗಳು ಶೇ. 85% ಅಧಿಕ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿರುತ್ತಾರೆ.
ಕನ್ನಿಕಾ ಗಜಾನನ ಭಟ್ 592 ಅಂಕಗಳನ್ನು (98.66 % ) ಪಡೆದು ರಾಜ್ಯಕ್ಕೆ 7ನೇ ರ‌್ಯಾಂಕ್ ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು, ಧನ್ಯಾ ಪಾಲನಂಕರ 584 (97.33% ) ಅಂಕಗಳನ್ನು ಪಡೆದು,ಕಾಲೇಜಿಗೆ ದ್ವಿತೀಯ ಸ್ಥಾನವನ್ನು, ಸಂಭ್ರಮಾ ರಾಜಾರಾಂ ಹೆಗಡೆ 583 (96.33 % ) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಶೇಕಡಾ 98% ಫಲಿತಾಂಶ ದಾಖಲಾಗಿದ್ದು ಪರೀಕ್ಷೆ ಬರೆದ 17 ವಿದ್ಯಾರ್ಥಿಗಳಲ್ಲಿ 2 ವಿದ್ಯಾರ್ಥಿಗಳು ಅತ್ಯುನ್ನತ ಅಂಕಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ತಸ್ಮೀಯಾ ಜವಳಿ 555 (92.5) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು, ಮಹಮ್ಮದ ಫೈಜಾನ 514 (85.66) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು , ನತಾಶಿಯಾ 503 (ಶೇ 83.83 ) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ನೂರಕ್ಕೆ ನೂರು ಅಂಕ ಪಡೆದವರು : ಗಣಿತ ಶಾಸ್ತ್ರ 4, ಸಂಸ್ಕೃತ 10 , ಜೀವಶಾಸ್ತ್ರ 2, ರಸಾಯನಶಾಸ್ತ್ರ 1, ಕನ್ನಡ 2, ಕಂಪ್ಯೂಟರ್ ಸೈನ್ಸ್ 1 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯರಾದ ಡಾ.ಆರ್.ಎಂ. ಭಟ್, ಕಾರ್ಯದರ್ಶಿ ಹಾಗೂ ಸಂಸ್ಥಾಪಕರಾದ ಎಲ್.ಎಂ. ಹೆಗಡೆ, ಮಿಯಾರ್ಡ್ಸ್ ಅಧ್ಯಕ್ಷರಾದ ಎಸ್. ಆರ್.ಹೆಗಡೆ ಮಿಯಾರ್ಡ್ಸ್ , ಉಪಾಧ್ಯಕ್ಷರಾದ ಡಾ. ರಮೇಶ್ ಹೆಗಡೆ, ಕಾಲೇಜಿನ ಅಧ್ಯಕ್ಷರಾದ ವಿ. ಜಿ ಜೋಶಿ, ಸಿ.ಇ.ಓ ಆದ ಸಿ.ಡಿ. ನಾಯ್ಕ, ಸದಸ್ಯರಾದ ಡಾ.ಶಿವರಾಂ ಕೆ.ವಿ., ವಿನಯ ಜೋಶಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹರ್ಷವ್ಯಕ್ತ ಪಡಿಸಿ ಶುಭ ಕೋರಿದ್ದಾರೆ.