ಕಾರವಾರದ ಐಎನ್ಎಸ್ ಕದಂಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ
ಕಾರವಾರ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಾಮೂಹಿಕ ಭದ್ರತೆಗೆ ಭಾರತ ಸದಾ ಬಧ್ದವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಅವರು ಶನಿವಾರ ಕಾರವಾರದ ಐ.ಎನ್.ಎಸ್ ಕದಂನಲ್ಲಿ, ಭಾರತೀಯ ನೌಕಾಪಡೆಯ ಆಫ್ಶೋರ್ ಗಸ್ತು ಹಡಗು, ಐಎನ್ಎಸ್ ಸುನಯನವನ್ನು ಹಿಂದೂ ಮಹಾಸಾಗರ ಹಡಗು (ಐಒಎಸ್) ಸಾಗರ್ (ಪ್ರದೇಶದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ) ಹಸಿರು ನಿಶಾನೆ ತೋರಿಸಿ ಮಾತನಾಡಿದರು.
IOS SAGAR ಉಡಾವಣೆಯು ಸಮುದ್ರ ಕ್ಷೇತ್ರದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಾಮೂಹಿಕ ಭದ್ರತೆಗೆ ಭಾರತದ ಬದ್ಧತೆಯ ಪ್ರತಿಬಿಂಬವಾಗಿದ್ದು, ಹಿಂದೂ ಮಹಾಸಾಗರದಲ್ಲಿ ಭಾರತದ ಹೆಚ್ಚುತ್ತಿರುವ ಉಪಸ್ಥಿತಿಯನ್ನು ತಿಳಿಸಿದ ಅವರು, ಇದು ನಮ್ಮ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮಾತ್ರ ಸಂಬಂಧಿಸಿಲ್ಲ, ಇದು ಈ ಪ್ರದೇಶದಲ್ಲಿನ ನಮ್ಮ ಸ್ನೇಹಪರ ರಾಷ್ಟ್ರಗಳ ನಡುವಿನ ಹಕ್ಕುಗಳು ಮತ್ತು ಕರ್ತವ್ಯಗಳ ಸಮಾನತೆಯತ್ತಲೂ ಗಮನ ಸೆಳೆಯುತ್ತದೆ. ನಮ್ಮ ನೌಕಾಪಡೆಯು ಹಿಂದೂ ಮಹಾಸಾಗರದಲ್ಲಿ, ಯಾವುದೇ ರಾಷ್ಟ್ರವು ತನ್ನ ಅಗಾಧ ಆರ್ಥಿಕತೆ ಮತ್ತು ಮಿಲಿಟರಿ ಶಕ್ತಿಯ ಆಧಾರದ ಮೇಲೆ ಮತ್ತೊಂದು ರಾಷ್ಟ್ರವನ್ನು ದಮನಿಸುವುದಿಲ್ಲ ಎಂಬುದನ್ನು ಖಚಿತಪಡಿಸುವ ಜೊತೆಗೆ, ರಾಷ್ಟçಗಳ ಹಿತಾಸಕ್ತಿಗಳನ್ನು ಅವರ ಸಾರ್ವಭೌಮತ್ವಕ್ಕೆ ಧಕ್ಕೆಯಾಗದಂತೆ ರಕ್ಷಿಸುತ್ತೆವೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ ಎಂದರು.
ಈ ಪ್ರದೇಶದಲ್ಲಿ ಹಡಗುಗಳ ಅಪಹರಣ ಮತ್ತು ಕಡಲ್ಗಳ್ಳರ ಕೃತ್ಯಗಳಂತಹ ಘಟನೆಗಳ ಸಂದರ್ಭದಲ್ಲಿ ಮೊದಲ ಪ್ರತಿಕ್ರಿಯೆ ನೀಡಿದ ಭಾರತೀಯ ನೌಕಾಪಡೆಯನ್ನು ಕಾರ್ಯವನ್ನು ಶ್ಲಾಘಿಸಿದ ಅವರು, ನೌಕಾಪಡೆಯು ಭಾರತೀಯ ಹಡಗುಗಳಲ್ಲದೆ ವಿದೇಶಿ ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಮುಕ್ತ ಸಂಚರಣೆ, ನಿಯಮ ಆಧಾರಿತ ಕ್ರಮ, ಕಡಲ್ಗಳ್ಳತನ ವಿರೋಧಿ ಮತ್ತು ಹಿಂದೂ ಮಹಾ ಸಾಗರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಭದ್ರಪಡಿಸುವುದು ಭಾರತೀಯ ನೌಕಾಪಡೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಅತ್ಯಾಧುನಿಕ ಹಡಗುಗಳು, ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು ಮತ್ತು ಉತ್ತಮ ತರಬೇತಿ ಪಡೆದ ಮತ್ತು ಪ್ರೇರಿತ ನಾವಿಕರೊಂದಿಗೆ, ಸಹೋದರತ್ವ ಮತ್ತು ಹಂಚಿಕೆಯ ಆಸಕ್ತಿಯ ಸಂಕೇತವಾಗಿ ಹಿಂದೂ ಮಹಾ ಸಾಗರವನ್ನು ಅಭಿವೃದ್ಧಿ ಪಡಿಸುವತ್ತ ನಾವು ಇತರ ಸ್ನೇಹಪರ ರಾಷ್ಟç್ಟ್ರಗಳೊಂದಿಗೆ ಮುಂದುವರಿಯಲು ನಿರ್ಧರಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಪ್ರಾಜೆಕ್ಟ್ ಸೀಬರ್ಡ್ ಅಡಿಯಲ್ಲಿ ನಿರ್ಮಿಸಲಾದ ರೂ. 2,000 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ಆಧುನಿಕ ಕಾರ್ಯಾಚರಣೆ, ದುರಸ್ತಿ ಮತ್ತು ಲಾಜಿಸ್ಟಿಕ್ ಸೌಲಭ್ಯಗಳನ್ನು ಸಚಿವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ, ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಮತ್ತು ನೌಕಾಪಡೆಯ ಇತರ ಹಿರಿಯ ಅಧಿಕಾರಿಗಳು ಇದ್ದರು.