ದಾಂಡೇಲಿ: ನಗರ ಸ್ವಚ್ಚ ಇಡುವ ಪೌರ ಕಾರ್ಮಿಕರಿಗೆ ಕಡ್ಡಾಯವಾಗಿ ನೀಡಬೇಕಾಗಿದ್ದ ಉಪಹಾರವನ್ನು ದಾಂಡೇಲಿ ಹಾಗೂ ಶಿರಸಿ ನಗರ ಸಭೆಗಳಲ್ಲಿ ಸ್ಥಗಿತಗೊಳಿಸಲಾಗಿದೆ. ಇದು ಸರಿಯಾದುದಲ್ಲ. ತಕ್ಷಣ ಸರಿಪಡಿಸದಿದ್ದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಡಿ. ಸ್ಯಾಮಸನ್ ತಿಳಿಸಿದ್ದಾರೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ ಮತ್ತು ದಾಂಡೇಲಿಯ ನಗರಸಭೆಗಳಲ್ಲಿ ದುಡಿಯುವ ಗುತ್ತಿಗೆ , ಹೊರಗುತ್ತಿಗೆ, ಸ್ವಚ್ಛತಾ ಕಾರ್ಮಿಕರು, ನೀರು ಸರಬರಾಜು ಹಾಗೂ ಇನ್ನಿತರ ಕಾರ್ಮಿಕರಿಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಕಾರ್ಮಿಕರಿಗೆ ಕಾಲಕಾಲಕ್ಕೆ ಅಗತ್ಯವಾಗಿ ನೀಡಬೇಕಾಗಿರುವ ಹಲವಾರು ಸವಲತ್ತುಗಳನ್ನು ನೀಡಲು ಸ್ಪಷ್ಟ ಆದೇಶ ಮತ್ತು ನಿರ್ದೇಶನ ಇದ್ದರೂ ಸಹ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ, ಬೆಳಗಿನ ಉಪಹಾರ ,ಕಾಲಕಾಲಕ್ಕೆ ಆರೋಗ್ಯ ತಪಾಸಣೆ (ಮಾಸ್ಟರ್ ಚೆಕಪ್)ಖಾಯಂ ಆದ ಕಾರ್ಮಿಕರಿಗೆ ಸಂಕಷ್ಟ ಭತ್ತೆ, ಕೆಲಸ ಮಾಡುವಾಗ ನೀಡಬೇಕಾಗಿರುವ ಸುರಕ್ಷಿತ ಪರಿಕರಗಳನ್ನು ನೀಡದೆ ಸ್ಥಳೀಯ ಅಧಿಕಾರಿಗಳು ಸರ್ಕಾರದ ಆದೇಶ ಮತ್ತು ನಿರ್ದೇಶನವನ್ನ ಉಲ್ಲಂಘಿತ್ತ ಬಂದಿರುತ್ತಾರೆ. ಇದನ್ನು ಜಿಲ್ಲಾಧಿಕಾರಿಗಳು, ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸ ಬೇಕು ಎಂ ದು ಒತ್ತಾಯಿಸಿದ್ದಾರೆ.
ಶಿರಸಿ ಮತ್ತು ದಾಂಡೇಲಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಸಮಯಕ್ಕೆ ಸರಿಯಾಗಿ ವೇತನ ನೀಡುವುದಿಲ್ಲ. ಹಾಗೂ ಬೆಳಗಿನ ಉಪಹಾರ ಕೂಡಾ ಸ್ಥಗಿತಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಕಳೆದ ಹಳೆ ಬಾಕಿ ಇರುವ ಉಪಹಾರ ಭತ್ಯೆ ಕೂಡ ನೀಡಿಲ್ಲ. ಖಾಯಂ ಕಾರ್ಮಿಕರ ಹೆಚ್ಚುವರಿಯಾದಂತಹ ವೇತನ ನೀಡಿಲ್ಲ. ಇಂತಹ ಹಲವು ಸೌಲತ್ತು ಗಳಿಂದ ಅತಿ ಹೆಚ್ಚು ದುಡಿಯುವ ಪರಿಶಿಷ್ಟ ಜಾತಿಯ ಸಮುದಾಯದ ಕಾರ್ಮಿಕರು ವಂಚನೆಗೊಳಗಾಗುತ್ತಿದ್ದಾರೆ. ಇದಕ್ಕೆ ಕಾರಣರಾಗಿರುವ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕು.
ಈಗಾಗಲೇ ಮಳೆಗಾಲ ಹತ್ತಿರವಾಗುತ್ತಿದ್ದು ಇದರ ಕುರಿತಂತೆ ಕೂಡ ಮಳೆಗಾಲಕ್ಕೆ ನೀಡಬೇಕಾಗಿರುವ ಎಲ್ಲಾ ಆರೋಗ್ಯ ಪರಿಕರಗಳನ್ನು, ಗಂಬೂಟ್ ,ರೈನ್ ಕೋಟ್ ಮುಂತಾದ ಸೌಲಭ್ಯಗಳನ್ನು ನೀಡಲು ಅಥವಾ ಖರೀದಿ ಪ್ರಕ್ರಿಯೆ ಈಗಲೇ ಪ್ರಾರಂಭಿಸುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ.