ದಾಂಡೇಲಿ : ಟ್ಯೂಷನ್ ಕೇಂದ್ರದ ಮೂಲಕ ಕಳೆದ ಹತ್ತು ವರ್ಷಗಳಿಂದ ರಾಜ್ಯಮಟ್ಟದಲ್ಲಿ ಗಮನ ಸೆಳೆದಿರುವ ಯೋಗಿ ಪಾಯಿಂಟ್ಸ್ ಅವರ ಆಶ್ರಯದಡಿ ಇದೇ ಮೊದಲ ಬಾರಿಗೆ ನಗರದ ರೋಟರಿ ಶಾಲೆಯಲ್ಲಿ 2025 – 26 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಇಂದಿನಿಂದ ಮೇ: 20ರವರೆಗೆ ಎಸ್ಎಸ್ಎಲ್ಸಿ ಸಮ್ಮರ್ ಟ್ಯೂಷನ್ ಕ್ಲಾಸ್ ನಡೆಯಲಿದೆ.
ಈಗಾಗಲೇ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ತಮ್ಮ ಯೋಗಿ ಪಾಯಿಂಟ್ಸ್ ಟ್ಯೂಷನ್ ಕೇಂದ್ರದಲ್ಲಿ ಟ್ಯೂಷನ್ ನೀಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ರ್ಯಾಂಕ್ ಪಡೆದುಕೊಂಡಿರುವುದು ಇವರ ಟ್ಯೂಷನ್ ಕೇಂದ್ರದ ಉತ್ಕೃಷ್ಟ ಗುಣಮಟ್ಟಕ್ಕೊಂದು ಅತ್ಯುತ್ತಮವಾದ ಸಾಕ್ಷಿ.
ರಾಜ್ಯಮಟ್ಟದಲ್ಲೇ ಹೆಸರಾಂತ ಗಣಿತ ಹಾಗೂ ವಿಜ್ಞಾನ ತಜ್ಞ ಶಿಕ್ಷಕರುಗಳಾಗಿರುವ ಯೋಗೇಶ್ ಶಾನಭಾಗ್ ಮತ್ತು ಪವನ್ ಕುಮಾರ್ ಬೆಂಗಳೂರು ಇವರೇ ಸ್ವತ: ಗಣಿತ ಮತ್ತು ವಿಜ್ಞಾನ ವಿಷಯವನ್ನು ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯಲ್ಲಿ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಕಲಿಸಲಿದ್ದಾರೆ. ಇವರ ಜೊತೆ ಇನ್ನೂ ನುರಿತ ಶಿಕ್ಷಕರು ಇಂಗ್ಲೀಷ್ ವ್ಯಾಕರಣ ಮತ್ತು ಕನ್ನಡ ವ್ಯಾಕರಣ ಕಲಿಸಲಿದ್ದಾರೆ.
ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಆಸಕ್ತಿಯನ್ನು ಮೀರಿ ಇನ್ನಷ್ಟು ಹೆಚ್ಚಿನ ಅಂಕಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಈ ಟ್ಯೂಷನ್ ಕ್ಲಾಸ್ ಇಂದಿನಿAದ ಆರಂಭವಾಗಲಿದ್ದು, ಪ್ರತಿದಿನ ಬೆಳಿಗ್ಗೆ 9:30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಟ್ಯೂಷನ್ ಕ್ಲಾಸ್ ನಡೆಯಲಿದೆ.
ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ ತಾಲೂಕಿನ 2025-26 ನೇ ಸಾಲಿನ ಕನ್ನಡ ಹಾಗೂ ಆಂಗ್ಲ ಮಾಧ್ಯಮ ವಿಭಾಗದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಈ ಟ್ಯೂಷನ್ ಕ್ಲಾಸಿಗೆ ಸೇರಿ ನಿರೀಕ್ಷೆಗೂ ಮೀರಿ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಶೈಕ್ಷಣಿಕವಾಗಿ ಉಜ್ವಲ ಭವಿಷ್ಯಕ್ಕೆ ಮುಂದಡಿ ಇಡಬೇಕೆಂಬುದು ಈ ಟ್ಯೂಷನ್ ಕ್ಲಾಸಿನ ಆಶಯವಾಗಿದೆ.
ಶೈಕ್ಷಣಿಕ ಜೀವನದಲ್ಲಿ ಎಸ್.ಎಸ್.ಎಲ್.ಸಿ ಬಹುಮೂಲ್ಯ ಹಂತವಾಗಿದ್ದು, ಈ ಹಂತವನ್ನು ಜೀವನದಲ್ಲಿ ಅವಿಸ್ಮರಣೀಯವಾಗಿಸಲು ಟ್ಯೂಷನ್ ಕ್ಲಾಸನ್ನು ಆಯೋಜಿಸಲಾಗಿದೆ ಎಂದು ಸಮ್ಮರ್ ಟ್ಯೂಷನ್ ಕ್ಲಾಸ್ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರ್. ಪಿ ನಾಯ್ಕ ಮತ್ತು ಸಮ್ಮರ್ ಟ್ಯೂಷನ್ ಕ್ಲಾಸಿನ ನೇತೃತ್ವವನ್ನು ವಹಿಸಿಕೊಂಡಿರುವ ಯೋಗೇಶ್ ಶಾನಭಾಗ್ ಅವರು ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ.