ದಾಂಡೇಲಿ : ತಾಲ್ಲೂಕಿನ ಬಡಕಾನಶಿರಡಾ ಗ್ರಾಮದ ಗಾವಟಾಣದ ಹತ್ತಿರ ಖಾಲಿ ಗದ್ದೆಯೊಂದರಲ್ಲಿ ವ್ಯಕ್ತಿಯ ಮೃತ ದೇಹವೊಂದು ಗುರುವಾರ ಪತ್ತೆಯಾಗಿದೆ.
ಬಡಕಾನಶಿರಡಾ ಗ್ರಾಮದ ನಿವಾಸಿಯಾಗಿರುವ ಅಂದಾಜು 45 ವರ್ಷ ವಯಸ್ಸಿನ ರಾಮ ಸಿದ್ದಪ್ಪ ಕಾಮ್ರೇಕರ್ ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸ್‌ಐಯವರಾದ ಶಿವಾನಂದ ನಾವದಗಿ ಮತ್ತು ಜಗದೀಶ ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಯಿತು. ಈ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.