ಕಾರವಾರ: ಪ್ರವಾಸೋದ್ಯಮವನ್ನು ಇನ್ನಷ್ಟು ಮೇಲ್ದರ್ಜೆಗೇರಿಸಲು ಹಾಗೂ ಎಲ್ಲಾ ವರ್ಗಗಳ ಅಂದರೆ ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ಕರಕುಶಲ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಕೆಗಳು ಹಾಗೂ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದೃಷ್ಟಿಕೋನದಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ, ವಿಶ್ವ ದರ್ಜೆಯಲ್ಲಿ ಅಭಿವೃದ್ಧಿ ಪರಿಸಲು ಕೇಂದ್ರ ಪ್ರವಾಸೋದ್ಯಮದಿಂದ Discover the Beauty of india ಶೀರ್ಷಿಕೆಯಡಿಯಲ್ಲಿ “Dekho Apna Desh Photo Contest-2025” ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಎಲ್ಲಾ ರಾಜ್ಯಗಳಲ್ಲಿನ ಜಿಲ್ಲೆಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ , ಸ್ಮಾರಕ, ವನ್ಯಜೀವಿ, ಜಿಐ ಟ್ಯಾಗ್ ಕರಕುಶಲ ಮತ್ತು ಕೈಮಗ್ಗಗಳು, ಭೂದೃಶ್ಯ, ಸಾಹಸ ವಿಭಾಗಗಳಲ್ಲಿ ಅತ್ತುತ್ಯಮ ಛಾಯಚಿತ್ರಗಳನ್ನು ಸೆರೆ ಹಿಡಿದು Mailto:Dekhoapnadeshphotos@gmail.com ಗೆ ನೇರವಾಗಿ ಕಳುಹಿಸಲು ಎಲ್ಲಾ ಸಾರ್ವಜನಿಕರಿಗೆ ಏ.7 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಆದ್ದರಿಂದ ಈ ಸ್ಪರ್ಧೆಯ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಅತ್ಯಾಕರ್ಷಕ ಛಾಯಾಚಿತ್ರಗಳನ್ನು ಸೆರೆಹಿಡಿದು, ಪ್ರವಾಸಿ ತಾಣಗಳ ಕಿರು ವಿವರಣೆಯೊಂದಿಗೆ Mailto:Dekhoapnadeshphotos@gmail.com ಗೆ ನೇರವಾಗಿ ಕಳುಹಿಸುವವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಛಾಯಾಚಿತ್ರ ಸ್ಪರ್ಧೆ: ಅರ್ಜಿ ಆಹ್ವಾನ
