ಸಿದ್ದಾಪುರ: ತಾಲೂಕಿನ ಶಿರಳಗಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಸತತ 4ನೇ ಬಾರಿ ಪರಶುರಾಮ ಕೆರಿಯಾ ನಾಯ್ಕ ಮುಗದೂರು, ನೂತನ ಉಪಾಧ್ಯಕ್ಷರಾಗಿ ಶ್ರೀಕಾಂತ ಎಲ್.ಭಟ್ಟ ಕೊಳಗಿ ಅವಿರೋಧವಾಗಿ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಸಂಘದ ನೂತನ ನಿರ್ದೇಶಕರಾದ ಮಹಾಬಲೇಶ್ವರ ಟಿ.ಮಡಿವಾಳ ಮುಗದೂರು, ದಯಾನಂದ ಜಿ.ಚಲವಾದಿ ಮುಗದೂರು, ದೇವಕಿ ವಿಷ್ಣು ನಾಯ್ಕ ಮುಗದೂರು, ಮೀನಾಕ್ಷಿ ಎಸ್.ನಾಯ್ಕ ಶಿರಳಗಿ,ಗುರುವಯ್ಯ ಎಸ್.ಗೌಡ ಹಂಜಕ್ಕಿ, ದಯಾನಂದ ಕೆ.ನಾಯ್ಕ ಬಿಕ್ಕಳಸೆ, ಕೆರೆಸ್ವಾಮಿ ಎಸ್.ಮಡಿವಾಳ ಹೆರವಳ್ಳಿ, ನಾಗರಾಜ ಜಿ.ನಾಯ್ಕ ಹಂಜಕ್ಕಿ, ಧನಂಜಯ ವಿ.ನಾಯ್ಕ ಶಿರಳಗಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕ ದಯಾನಂದ ಕೆ.ತಡಗಳಲೆ, ಚುನಾವಣಾಧಿಕಾರಿ ಬಿ.ಡಿ.ಡಿಸೋಜ ಹಾಜರಿದ್ದರು.