ಶಿರಸಿ: ಶಿರಸಿ ಮೂಲದ ಪ್ರಸ್ತುತ ಹುಬ್ಬಳ್ಳಿಯಲ್ಲಿ ಹಿರಿಯ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದ ವಿಶ್ವಾಮಿತ್ರ ಹೆಗಡೆ ಹೃದಯಾಘಾತದಿಂದಾಗಿ ನಿಧನ ಹೊಂದಿದರು.
ಮೂಲತಃ ತಾಲೂಕಿನ ಭತ್ತಗುತ್ತಿಗೆಯವರಾದ ವಿಶ್ವಾಮಿತ್ರ ಹೆಗಡೆ ಮೊದಲು ಶಿರಸಿಯಲ್ಲಿಯೇ ಪತ್ರಕರ್ತರಾಗಿದ್ದು, ಕನ್ನಡಪ್ರಭ ಮತ್ತು ವಿಶ್ವವಾಣಿ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದರು. ಸಜ್ಜನ ಪತ್ರಕರ್ತರಾಗಿದ್ದ ಇವರ ನಿಧನ ಪತ್ರಿಕಾರಂಗಕ್ಕೆ ಬಹುದೊಡ್ಡ ನಷ್ಟವಾಗಿದೆ.